×
Ad

ರಾಜಸ್ಥಾನದ ಸಂಪುಟ ಪುನಾರಚನೆ: 15 ಸಚಿವರು ಪ್ರಮಾಣ ವಚನ ಸ್ವೀಕಾರ

Update: 2021-11-21 16:18 IST
photo: Times of india

ಜೈಪುರ: ರಾಜಸ್ಥಾನದಲ್ಲಿ ರವಿವಾರ ಅಶೋಕ್ ಗೆಹ್ಲೊಟ್ ನೇತೃತ್ವದ ಕಾಂಗ್ರೆಸ್ ಸರಕಾರದ ಸಂಪುಟ ಪುನಾರಚನೆ ಮಾಡಲಾಗಿದ್ದು, 15 ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ರಾಜ್ಯಪಾಲ ಕಲರಾಜ್ ಮಿಶ್ರಾ ಅವರು ನೂತನ ಸಚಿವರಿಗೆ ಪ್ರಮಾಣವಚನ ಭೋದಿಸಿದರು.

11 ಮಂದಿ ಸಂಪುಟ ದರ್ಜೆ ಸಚಿವರಾಗಿ ಹಾಗೂ 4 ಮಂದಿ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಚಿನ್ ಪೈಲಟ್  ಬಣದ ಐವರು ನಿಷ್ಠಾವಂತರು 30 ರಾಜ್ಯ ಸಚಿವರಲ್ಲಿ ಸೇರಿದ್ದಾರೆ.

ಹೊಸ ಸಚಿವರಲ್ಲಿ ಝಹಿದಾ ಖಾನ್  ಇಂಗ್ಲೀಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಉಳಿದವರು ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಿರಿಯ ಸಚಿವರ ಪೈಕಿ ಬೀರೇಂದ್ರ ಸಿಂಗ್ ಮೊದಲಿಗೆ ಪ್ರಮಾಣ ವಚನ ಸ್ವೀಕರಿಸಿದರೆ, ಶಕುಂತಲಾ ರಾವತ್ ಕೊನೆಯವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹೇಮಾರಾಮ್ ಚೌಧರಿ ಸಂಪುಟ ದರ್ಜೆ ಸಚಿವರಾಗಿ ಮೊದಲಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News