ಉಡುಪಿ ಪ್ರಸಾದ್ ನೇತ್ರಾಲಯದಲ್ಲಿ ನೂತನ ವಿಭಾಗಗಳ ಉದ್ಘಾಟನೆ

Update: 2021-11-21 14:04 GMT

ಉಡುಪಿ, ನ.21: ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಅರ್ಥೋಪ್ಟಿಕ್ ಕಣ್ಣಿನ ವಿಭಾಗ, ನಿಮ್ನ ದೃಷ್ಟಿ ನೆರವು ಕ್ಲಿನಿಕ್ ವಿಭಾಗ, ಮಕ್ಕಳ ನೇತ್ರ ಚಿಕಿತ್ಸಾ ಮತ್ತು ಐ ಟ್ರೇಸ್ ವಿಭಾಗಗಳ ಉದ್ಘಾಟನೆಯು ರವಿವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀವರ್ಚನ ನೀಡಿ, ಭಗವಂತನ ಆರಾಧನೆ ಕೇವಲ ಗುಡಿ ಗೋಪುರ ಗಳಲ್ಲಿ ಮಾತ್ರವಲ್ಲದೆ ಜನರಿಗೆ ಸೇವೆ ನೀಡುವ ಮೂಲಕವೂ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರಸಾದ್ ನೇತ್ರಾಲಯ ಜನರಿಗೆ ಉತ್ತಮ ಸೇವೆ ನೀಡುವ ಕಾರ್ಯ ಮಾಡುತ್ತಿದೆ. ಇದು ಕೃಷ್ಣ ನೀಡಿರುವ ಪ್ರಸಾದವಾಗಿದೆ. ಮುಂದೆ ಇನ್ನಷ್ಟು ಸೇವೆ ನೀಡುವಂತಾಗಲಿ ಎಂದು ಹಾರೈಸಿದರು.

ಅರ್ಥೋಪ್ಟಿಕ್ ಕಣ್ಣಿನ ವಿಭಾಗವನ್ನು ಉದ್ಘಾಟಿಸಿದ ಗುಜರಾತ್ ವಡ್ನಗರ್‌ನ ಸರ್ವೋದಯ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸೊಮ್‌ಭಾ ಮೋದಿ ಮಾತನಾಡಿ, ಆಸ್ಪತ್ರೆಯಲ್ಲಿ ಅಳವಡಿಸಲಾಗುವ ಅತ್ಯಾಧುನಿಕ ಸೌಲಭ್ಯಗಳಿಂದ ಬಡವರು ಸಹಿತ ಎಲ್ಲ ಸಾರ್ವಜನಿಕರಿಗೆ ಸಾಕಷ್ಟು ಹಾಯವಾಗುತ್ತದೆ ಎಂದು ತಿಳಿಸಿದರು.

ಜ್ಯೋತಿಷ್ಯ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ ಶುಭಾಶಂಸನೆಗೈ ದರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ, ಮಾಹೆ ಪ್ರೊಚಾನ್ಸೆಲರ್ ಡಾ.ಎಸ್.ಎಸ್. ಬಲ್ಲಾಳ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾವುಲಾ ಕುಂದರ್ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಚಿವ ಸುನೀಲ್ ಕುಮಾರ್, ಮುಂಬೈ ಬಿಜೆಪಿ ಕಾರ್ಯದರ್ಶಿ ಮೋಹನ್ ಗೌಡ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಆಸ್ಪತ್ರೆಯ ನಿರ್ದೇಶಕ ರಘುರಾಮ್ ರಾವ್ ಕೆ. ಉಪಸ್ಥಿತರಿದ್ದರು.

ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಮುದ್ದೋಡಿ ಹಾಗೂ ಪ್ರೇಮ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News