ಯುವ ಜನತಾದಳದ ಅಧ್ಯಕ್ಷರಾಗಿ ಸಂಜಯ್ ಕುಮಾರ್
Update: 2021-11-21 20:20 IST
ಉಡುಪಿ, ನ.21: ಜನತಾದಳ(ಜಾತ್ಯತೀತ) ಉಡುಪಿ ಜಿಲ್ಲಾ ಯುವ ಜನತಾ ದಳದ ಅಧ್ಯಕ್ಷರಾಗಿ ಸಂಜಯ ಕುಮಾರ್ ಅವರನ್ನು ಜಿಲ್ಲಾಧ್ಯಕ್ಷ ಯೋಗಿಶ್ ವಿ.ಶೆಟ್ಟಿ ನೇಮಕಾತಿ ಮಾಡಿದ್ದಾರೆ.
ಇವರು ಯುವನಾಯಕ, ಸಮಾಜ ಸೇವಕರು, ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದು, ಯುವಕರ ತಂಡವನ್ನು ಕಟ್ಟಿ ಕೊಂಡು ಸಮಾಜ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡವರಾಗಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಜಯರಾಮ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.