×
Ad

ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಜಿಲ್ಲಾಮಟ್ಟದ ಸ್ಪರ್ಧೆಗಳು

Update: 2021-11-21 20:23 IST

ಉಡುಪಿ, ನ.21: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ನ.18ರಂದು ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಪ್ರೌಢಶಾಲಾ ಹಂತ, ಪದವಿ ಪೂರ್ವ ಹಂತ ಹಾಗೂ ಪದವಿ/ಸ್ನಾತಕೋತ್ತರ ಪದವಿ ಹಂತಗಳಲ್ಲಿ ಈಗಾಗಲೇ ನಡೆದ ಶಾಲಾ, ಕಾಲೇಜು ಮಟ್ಟ ಹಾಗೂ ತಾಲ್ಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ 122 ಸ್ಪರ್ಧಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಭಾರತ ಚುನಾವಣಾ ಆಯೋಗವು ಮತದಾರರ ನೋಂದಣಿ, ಮತದಾನ ಜಾಗೃತಿಯ ಹಿನ್ನಲೆಯಲ್ಲಿ ನೀಡಿದ ವಿಷಯಗಳಲ್ಲಿ ಎಲ್ಲಾ ಹಂತಗಳಿಗೂ ಕನ್ನಡ ಪ್ರಬಂಧ, ಆಂಗ್ಲ ಪ್ರಬಂಧ, ಭಿತ್ತಿಚಿತ್ರ ರಚನೆ ಹಾಗೂ ಪ್ರೌಢಶಾಲೆ ಹಂತಕ್ಕೆ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ. ಸ್ಪರ್ಧೆ ಗಳನ್ನು ನಡೆಸಲು ಅಗತ್ಯ ಮಾರ್ಗದರ್ಶನ ನೀಡಿದರು.

ಸ್ಪರ್ಧೆಗಳ ಚಾಲನಾ ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಯೋಜನಾ ಅಂದಾಜು ಮೌಲ್ಯ ಮಾಪನಾಧಿಕಾರಿ ರಾಧಾಕೃಷ್ಣ ಅಡಿಗ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ ಕಾಮತ್, ಪದವಿಪೂರ್ವ ಶಿಕ್ಷಣ ಇಲಾಖೆಯ ಸ್ಪರ್ಧೆಗಳ ನೋಡಲ್ ಅಧಿಕಾರಿ ಪರಮೇಶ್ವರ್, ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ನಾಗರಾಜ್, ಪದವಿ ಹಂತದ ಸ್ಪರ್ಧೆಗಳ ನೋಡಲ್ ಅಧಿಕಾರಿ ಮಂಜುಾಥ್ ಮೊದಲಾದವರು ಹಾಜರಿದ್ದರು.

ಬಹುಮಾನ ವಿಜೇತರ ವಿವರ

ಪ್ರೌಢಶಾಲೆ:- ಕನ್ನಡ ಪ್ರಬಂಧ: ಪ್ರ-ತ್ರಿಶಾ, ದ್ವಿ- ರಕ್ಷಾ, ತೃ- ಸೃಜ. ಇಂಗ್ಲಿಷ್ ಪ್ರಬಂಧ: ಪ್ರ- ಅಂಕಿತಾ, ದ್ವಿ-ನರೇಂದ್ರ ಕುಡ್ವ, ತೃ-ಅನ್ವಿತಾ. ಭಿತ್ತಿಚಿತ್ರ ರಚನೆ- ಪ್ರ- ದೀಪ್ತಿ, ದ್ವಿ-ರಜತ್ ಕೆ., ತೃ-ಮೋಹಿತ್ ಶೆಣೈ. ರಸಪ್ರಶ್ನೆ: ಪ್ರ- ಶ್ರಿಯಾ ಮತ್ತು ಅನನ್ಯ, ದ್ವಿ- ದರ್ಶನ್ ಮತ್ತು ಅಖಿಲೇಷ್, ತೃ- ಪೂರ್ಣಚಂದ್ರ ಉಡುಪ ಮತ್ತು ಕೌಶಿಕ್ ಕೆ.ಎಸ್.

ಪಿಯು ಕಾಲೇಜು:- ಕನ್ನಡ ಪ್ರಬಂಧ: ಪ್ರ-ದಿವ್ಯಾ, ದ್ವಿ- ವೀಣಾ ನಾಯಕ್, ತೃ- ಸ್ವಾತಿ. ಇಂಗ್ಲಿಷ್ ಪ್ರಬಂಧ: ಪ್ರ- ಶ್ರಾವ್ಯ, ದ್ವಿ- ಪಲ್ಲವಿ ರಾವ್, ತೃ-ಧನ್ಯಾ ಶೆಟ್ಟಿ. ಭಿತ್ತಿಚಿತ್ರ ರಚನೆ- ಪ್ರ- ಆದ್ರಿತಿ, ದ್ವಿ-ಗಗನ್ ಸುವರ್ಣ, ತೃ- ಆಕರ್ಷ್.
ಪದವಿ ಕಾಲೇಜು: ಕನ್ನಡ ಪ್ರಬಂಧ: ಪ್ರ-ಅಕ್ಷಿತಾ ಶೆಟ್ಟಿ, ದ್ವಿ- ವಾಣಿ ಎಚ್.ಎಂ., ತೃ- ಗಣೇಶ್. ಇಂಗ್ಲಿಷ್ ಪ್ರಬಂಧ: ಪ್ರ- ನಿಶಾ ಬಂಗೇರ, ದ್ವಿ-ಅನುಶ್ರೀ, ತೃ-ಸೋನಾ. ಭಿತ್ತಿಚಿತ್ರ ರಚನೆ: ಪ್ರ- ದಿವ್ಯಾ ಶೆಟ್ಟಿ, ದ್ವಿ- ಸಮೀಕ್ಷಾ, ತೃ-ದೀಕ್ಷಿತಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News