×
Ad

ದ.ಕ.ಜಿಲ್ಲಾ ಕಸಾಪ ನೂತನ ಅಧ್ಯಕ್ಷರಾಗಿ ಎಂ.ಪಿ.ಶ್ರೀನಾಥ್ ಆಯ್ಕೆ

Update: 2021-11-21 20:53 IST

ಮಂಗಳೂರು, ನ.21: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಉಜಿರೆ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ, ಲೇಖಕ ಎಂ.ಪಿ.ಶ್ರೀನಾಥ್ ಆಯ್ಕೆಯಾಗಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ ಕೂಡ ಕಣದಲ್ಲಿದ್ದು, ಸೋಲನ್ನೊಪ್ಪಿಕೊಂಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲೆಯ 10 ಕೇಂದ್ರಗಳಲ್ಲಿ ಇಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆದಿತ್ತು. ಬಳಿಕ ಮತ ಎಣಿಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎಂ.ಪಿ.ಶ್ರೀನಾಥ್ ಚುನಾಯಿತರಾಗಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಡಾ.ಮಹೇಶ್ ಜೋಶಿಗೆ ಅಧಿಕ ಮತ

ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಚಲಾವಣೆಗೊಂಡಿರುವ 2033 ಮತಗಳಲ್ಲಿ ನಾಡೋಜ ಡಾ.ಮಹೇಶ್ ಜೋಷಿ ಅತ್ಯಧಿಕ 988 ಮತಗಳನ್ನು ಪಡೆದಿದ್ದಾರೆ.

2033 ಮತಗಳಲ್ಲಿ 29 ಮತಗಳು ತಿರಸ್ಕೃತಗೊಂಡಿದೆ. ಇನ್ನುಳಿದಂತೆ ಮಾಯಣ್ಣ 521,ಶೇಖರಗೌಡ ಮಾಲಿ ಪಾಟೀಲ 270, ಸರಸ್ವತಿ ಶಿವಪ್ಪ ಚಿಮ್ಮಲಗಿ 102 ಮತಗಳನ್ನು ಪಡೆದರು. ಶರಣಬಸಪ್ಪ ಕಲ್ಲಪ್ಪ ದಾನಕೈ ಮತ್ತು ಕೆ. ರವಿ ಅಂಬೇಕರ್ ಒಂದೇ ಒಂದು ಮತಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News