ಸಮಸ್ತ ಪಬ್ಲಿಕ್ ಪರೀಕ್ಷೆ: ಅರ್ಜಿ ಸಲ್ಲಿಸಲು ನ.30 ಕೊನೆಯ ದಿನ
ಮಂಗಳೂರು, ನ.21:ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ ಮದ್ರಸಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿ 2022ರ ಮಾರ್ಚ್ 12,13ರಂದು ನಡೆಯುವ ಪಬ್ಲಿಕ್ ಪರೀಕ್ಷೆಗೆ ಅರ್ಜಿ ಮತ್ತು ಶುಲ್ಕ ಪಾವತಿಸುವ ಪ್ರಕ್ರಿಯೆಗಳು ಪ್ರಾರಂಭಗೊಂಡಿದೆ. ಅರ್ಜಿ ಸಲ್ಲಿಸಲು ನ.30 ಕೊನೆಯ ದಿನಾಂಕವಾಗಿದೆ.
ವೆಬ್‌ಸೈಟ್‌ನಲ್ಲಿ https:/online.samastha.info ಲಾಗಿನ್ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಮತ್ತು ಶುಲ್ಕವನ್ನು ಪಾವತಿಸಬೇಕು. ಪಬ್ಲಿಕ್ ಪರೀಕ್ಷೆಯ ಎಲ್ಲಾ ತರಗತಿಗಳ ಪ್ರತಿಯೊಬ್ಬ ವಿದ್ಯಾರ್ಥಿಗೆ 180 ರೂ ಪರೀಕ್ಷಾ ಶುಲ್ಕವಾಗಿದ್ದು ಹತ್ತಕ್ಕಿಂತ ಕಡಿಮೆ ಅಪೇಕ್ಷಾರ್ಥಿಗಳಿರುವ ಮದ್ರಸಗಳಿಗೆ ಸ್ವಂತ ಸೆಂಟರ್‌ಗಾಗಿ ಶುಲ್ಕ ಸಹಿತ 1,800 ರೂ. ಪಾವತಿಸಬೇಕಾಗುತ್ತದೆ.
ಯತೀಮ್ ಖಾನಗಳ ಅನಾಥ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಇರುವುದರಿಂದ ಪ್ರಸ್ತುತ ಸ್ಥಾಪನೆಗಳ ಪಬ್ಲಿಕ್ ಪರೀಕ್ಷೆ ವಿದ್ಯಾರ್ಥಿಗಳ ವಿವರ ಆನ್‌ಲೈನ್‌ನಲ್ಲಿ ಸೇರಿಸಿ ಅನಾಥರಲ್ಲದವರ ಶುಲ್ಕ ಸಮಸ್ತ ಕೇಂದ್ರ ಕಚೇರಿಯಲ್ಲಿ ಪಾವತಿಸಬೇಕು. ಅನಾಥ ವಿದ್ಯಾರ್ಥಿಗಳ ಶುಲ್ಕ ಸಂಭಾವನೆಯಾಗಿ ಸಿಕ್ಕಿದೆ ಎಂಬುದಕ್ಕೆ ಯತೀಮ್ ಖಾನಾ ಕಮಿಟಿಯ ರಶೀದಿ ಜೊತೆಗೆ ಇರಬೇಕು.
ವಿದೇಶ ರಾಷ್ಟ್ರಗಳಲ್ಲಿ ಮಾರ್ಚ್ 11, 12ರಂದು ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಯೊಬ್ಬನಿಗೆ 700 ರೂ ಪರೀಕ್ಷಾ ಶುಲ್ಕವಾಗಿರುತ್ತದೆ.
ನಿಗದಿತ ದಿನಾಂಕದ ನಂತರ ಶುಲ್ಕದ ಹೊರತಾಗಿ ಪ್ರತಿ ವಿದ್ಯಾರ್ಥಿಗೆ ಹೆಚ್ಚುವರಿ 90 ರೂ. ಪಾವತಿಸಬೇಕಾಗುತ್ತದೆ ಮತ್ತು ಇದಕ್ಕೆ 15 ದಿನಗಳ ಕಾಲಾವಕಾಶ ಮಾತ್ರ ಇರುತ್ತದೆ ಎಂದು ಸಮಸ್ತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.