ಉಚ್ಚಿಲದಲ್ಲಿ ಮೊಗವೀರ ಭವನ ಲೋಕಾರ್ಪಣೆ

Update: 2021-11-21 16:44 GMT

ಕಾಪು, ನ.21: ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಹಾಗೂ ಮಂಗಳೂರು ಎಂಆರ್‌ಪಿಎಲ್ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನಿಟಿಎಟೀವ್ ಸಹಯೋಗದೊಂದಿಗೆ ಉಚ್ಚಿಲದಲ್ಲಿ ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ, ಸುಸಜ್ಜಿತ ಹಾಗೂ ಸಂಪೂರ್ಣ ಹವಾನಿಯಂತ್ರಿತ ‘ಮೊಗವೀರ ಭವನ’ ರವಿವಾರ ಲೋಕಾರ್ಪಣೆ ಗೊಂಡಿತು.

ಭವನವನ್ನು ಉದ್ಘಾಟಿಸಿದ ಮಂಗಳೂರು ಎಂಆರ್‌ಪಿಎಲ್‌ನ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಾತನಾಡಿ, ಒಂದು ಊರು ಬೆಳೆಯಬೇಕಾದರೆ ಬಹುಜನರಿಗೆ ಉಪಯೋಗವಾಗುವಂತೆ ಯೋಜನೆ ಬರಬೇಕು. ಅದಕ್ಕೆ ಪೂರಕವಾಗಿ ಶಿಕ್ಷಣ, ಆರೋಗ್ಯ, ಸಮುದಾಯ ಭವನ ನಿರ್ಮಾಣದಂತಹ ಕೆಲಸವಾಗಬೇಕು. ಎಂಆರ್‌ಪಿಎಲ್ ಕಳೆದ 5 ವರ್ಷದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಎಸ್‌ಆರ್ ಫಂಡ್‌ನಡಿ 100 ಕೋಟಿ ರೂ. ಅನುದಾನ ನೀಡಿದೆ ಎಂದು ಹೇಳಿದರು.

ಮಂಗಳೂರು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮೊಗವೀರರು ಕಠಿಣ ಪರಿಶ್ರಮ ಜೀವಿಗಳು. ನಾವು ಚುನಾವಣೆ ಸಂದರ್ಭಕ್ಕಷ್ಟೇ ರಾಜಕೀಯ ಮಾಡುತ್ತೇವೆ. ಆದರೆ ಸಮುದಾಯದ ಏಳಿಗೆ, ಸಮಾಜದ ಅಭಿವೃದ್ಧಿ ಕೆಲಸಗಳನ್ನು ನಾವೆಲ್ಲ ಒಗ್ಗಟ್ಟಾಗಿ ಮಾಡುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ.ಶಂಕರ್ ಮಾತನಾಡಿ, ಮೊಗವೀರ ಭವನ ನಮ್ಮೆಲ್ಲರ ಸ್ವಾಭಿಮಾನದ ಸಂಕೇತವಾಗಿದೆ. ಎಲ್ಲಾ ಸಮಾರಂಭಕ್ಕೂ ಈ ಭವನ ಯೋಗ್ಯವಾಗಿದೆ. ಈ ಭವನದ ಆದಾಯದಿಂದಲೂ ಬಡ ಮಕ್ಕಳ ವಿದ್ಯಾರ್ಥಿವೇತನ, ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸಲಾಗುವುದು ಎಂದರು.

ಭವನದಲ್ಲಿರುವ ಕುಲಮಹಾಸೀ ಸಭಾಭವನ, ಮಾಧವ ಮಂಗಲ ಸಭಾಭವನ, ಶ್ರೀಶಾಲಿನಿ, ನಾಡೋಜ ಡಾ.ಜಿ.ಶಂಕರ್ ವೇದಿಕೆ, ಶ್ರೀಮತಿ ಗೀತಾ ಆನಂದ್ ಸಿ.ಕುಂದರ್ ವೇದಿಕೆಯನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸ ಲಾಯಿತು. ಶಾಸಕರಾದ ಲಾಲಾಜಿ ಆರ್. ಮೆಂಡನ್, ಕೆ.ರಘುಪತಿ ಭಟ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ ಮಾತನಾಡಿದರು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ.ಸುವರ್ಣ, ಬಾರ್ಕೂರು ಶ್ರೀಕುಲಮಾಸೀ ಅಮ್ಮನವರ ದೇವಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹರಿಯಪ್ಪ ಕೋಟ್ಯಾನ್, ಶ್ರೀಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ.ಅಮೀನ್, ಉದ್ಯಾವರ ಸದಿಯ ಸಾಹುಕಾರ್ ಮನೆತನದ ಪ್ರತಿನಿಧಿ ಯು.ಗಣೇಶ್, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘದ ಶಾಖಾಧ್ಯಕ್ಷ ಕೆ.ಕೆ.ಕಾಂಚನ್, ದ.ಕ.ಮೊಗವೀರ ಮಹಿಳಾ ಸಂಘ ಉಚ್ಚಿಲ ಅಧ್ಯಕ್ಷೆ ಅಪ್ಪಿ ಸುವರ್ಣ, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಲೆಕ್ಕ ಪರಿಶೋಧಕ ಲೋಕೇಶ್ ಪುತ್ರನ್, ಪ್ರಮುಖರಾದ ಅಜಿತ್ ಸುವರ್ಣ, ಸುರೇಶ್ ಕಾಂಚನ್, ಸುಭಾಸ್‌ ಚಂದ್ರ ಕಾಂಚನ್, ಸುಧಾಕರ್, ರಾಜು ವಂಡ್ಸೆ, ಮೊಗವೀರ ಯುವ ಸಂಘಟನೆ ಅಧ್ಯಕ್ಷ ಕೆ.ಶಿವರಾಮ ಕೋಟ, ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಯ ಉಪಸ್ಥಿತರಿದ್ದರು.

ಬ್ರಹ್ಮಕಲಶ ಪುಣ್ಯೋತ್ಸವ ಸಮಿತಿ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ದಂಪತಿ, ಮತ್ಸ್ಯೋದ್ಯಮಿ ಆನಂದ ಸಿ.ಕುಂದರ್ ದಂಪತಿ, ಎಂಜಿನಿಯರ್ ಯೋಗೀಶ್ ಚಂದ್ರಾಧರ್ ಕುಂದರ್, ಹಿರಿಯಪ್ಪ ಕೋಟ್ಯಾನ್, ವಾಸುದೇವ ಸಾಲ್ಯಾನ್, ಕಿಶೋರ್ ಸಾಲ್ಯಾನ್ ಎರ್ಮಾಳ್ ಬಡಾ, ಗ್ರಾ.ಪಂ. ಸದಸ್ಯ ಶಿವಕುಮಾರ್ ಮೆಂಡನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಚಂದ್ರ ಬೈಕಂಪಾಡಿ ಅವರನ್ನು ಸನ್ಮಾನಿಸಲಾಯಿತು.

ಉಚ್ಚಿಲ ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಕಾರ್ಯದರ್ಶಿ ಸುಧಾಕರ ಕುಂದರ್ ವಂದಿಸಿದರು. ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News