ಪರ್ಯಾಯ ಮಹೋತ್ಸವಕ್ಕೆ ಸರಕಾರ ಸರ್ವ ಸಹಕಾರ: ಸುನೀಲ್ ಕುಮಾರ್
ಉಡುಪಿ, ನ.21: ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವಕ್ಕೆ ರಾಜ್ಯ ಸರಕಾರದ ವತಿಯಿಂದ ಸರ್ವರೀತಿಯ ಸಹಕಾರ ವನ್ನು ನೀಡಲಾಗುವುದು ಎಂದು ರಾಜ್ಯ ಇಂಧನ ಹಾಗೂ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಭರವಸೆ ನೀಡಿದ್ದಾರೆ.
ಉಡುಪಿ ರಥಬೀದಿಯ ಶ್ರೀಕೃಷ್ಣ ಸಭಾಮಂದಿರದಲ್ಲಿ ರವಿವಾರ ನಡೆದ ಭಾವಿ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಸರ್ವಸಮಿತಿಯ ಪ್ರಗತಿ ಪರಿಶೀಲನಾ ಸೆಯಲ್ಲಿ ಅವರು ಮಾತನಾಡುತಿದ್ದರು.
ಇದೇ ಸಂದರ್ಭದಲ್ಲಿ ಪರ್ಯಾಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ವಿಶೇಷ ಮನವಿಯನ್ನು ಸಲ್ಲಿಸಲಾಯಿತು. ಉಡುಪಿ ಶಾಸಕ ಹಾಗೂ ಸಮಿತಿಯ ಕಾರ್ಯಾಧ್ಯಕ್ಷ ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಪು ಶಾಸಕ ಲಾಲಾಜಿ ಮೆಂಡನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಮಂಗಳೂರು ವಿವಿ ಉಪಕುಲಪತಿ ಸುಬ್ರಹ್ಮಣ್ಯ ಯಡ ಪಡಿತ್ತಾಯ ಉಪಸ್ಥಿತರಿದ್ದರು.
ವಾಸುದೇವ ಪರಂಪಳ್ಳಿ ಪ್ರಾರ್ಥಿಸಿದರು. ಸಮಿತಿಯ ಅಧ್ಯಕ್ಷ ಕೆ.ಸೂರ್ಯ ನಾರಾಯಣ ಉಪಾಧ್ಯಾಯ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ವಂದಿಸಿದರು. ಸಮಿತಿಯ ಬಿ.ವಿ.ಲಕ್ಷ್ಮೀ ನಾರಾಯಣ ಕಾರ್ಯಕ್ರಮ ನಿರ್ವಹಿಸಿದರು.