ದ.ಕ.ಜಿಲ್ಲಾದ್ಯಂದ ಸಾಧಾರಣ ಮಳೆ
ಮಂಗಳೂರು, ನ.21:ಹವಾಮಾನ ವೈಪರಿತ್ಯದಿಂದಾಗಿ ದ.ಕ.ಜಿಲ್ಲೆಯಲ್ಲಿ ರವಿವಾರ ಸಾಧಾರಣ ಮಳೆಯಾಗಿದೆ. ಮುಂಜಾನೆ ಯಿಂದಲೇ ಮೋಡ ಕವಿದ ವಾತಾವರಣವಿದ್ದು, ಜಿಲ್ಲೆಯ ಹಲವು ಕಡೆ ಆಗಾಗ ಮಳೆ ಸುರಿದಿದೆ.
ಕಡಬ ತಾಲೂಕಿಮ ಕೊಂಬರು ಸುತ್ತಮುತ್ತ ಸಂಜೆ ಹೊತ್ತು ಸತತ ಅರ್ಧ ಗಂಟೆ ಮಳೆಯಾಗಿದೆ. ವಿಟ್ಲ, ಕೊಣಾಜೆ, ಉಳ್ಳಾಲ, ಮಂಗಳೂರು ಸಹಿತ ಹಲವು ಕಡೆ ಮಳೆಯಾಗಿದೆ.
ಶನಿವಾರ ರಾತ್ರಿ ಕಡಬ ತಾಲೂಕಿನಲ್ಲಿ 1 ಮನೆಗೆ ಭಾಗಶಃ ಹಾನಿಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕಳೆದ ಎಪ್ರಿಲ್‌ನಿಂದ ಈವರೆಗೆ 707 ಮನೆಗಳಿಗೆ ಭಾಗಶಃ ಹಾನಿಯಾದಂತಾಗಿದೆ. ಜಿಲ್ಲೆಯಲ್ಲಿ ಈವರೆಗೆ 131 ಮನೆಗಳು ಸಂಪೂರ್ಣ ಹಾನಿಯಾಗಿದೆ.
ಶನಿವಾರ ಮುಂಜಾನೆಯಿಂದ ರವಿವಾರ ಮುಂಜಾನೆಯವರೆಗೆ ಪುತ್ತೂರು ತಾಲೂಕಿನಲ್ಲಿ ಗರಿಷ್ಠ 36.3 ಮತ್ತು ಸುಳ್ಯದಲ್ಲಿ ಕನಿಷ್ಠ 8.8 ಮಿ.ಮೀ ಮಳೆಯಾಗಿದೆ. ಉಳಿದಂತೆ ಮೂಡುಬಿದರೆ 17.0, ಕಡಬ 15.8, ಬೆಳ್ತಂಗಡಿ 20.6, ಬಂಟ್ವಾಳ 21.5, ಮಂಗಳೂರು 12.3 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 18.4 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ಕೇವಲ 2.0 ಮಿ.ಮೀ. ಮಳೆಯಾಗಿತ್ತು.