ದುಬೈಯ 44,000 ನಿವಾಸಿಗಳಿಗೆ ಯುಎಇ ಗೋಲ್ಡನ್ ವೀಸಾ ಸೌಲಭ್ಯ

Update: 2021-11-23 02:49 GMT

ಅಬುಧಾಬಿ, ನ.22: ದೀರ್ಘಾವಧಿಯ ನಿವಾಸಸ್ಥಾನ ಯೋಜನೆಯನ್ನು ಆರಂಭಿಸಿದಂದಿನಿಂದ ದುಬೈಯ 44,000ಕ್ಕೂ ಅಧಿಕ ನಿವಾಸಿಗಳು ಗೋಲ್ಡನ್ ವೀಸಾ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಶ್ವದೆಲ್ಲೆಡೆಯ ಪ್ರತಿಭಾವಂತರನ್ನು ಆಕರ್ಷಿಸಲು ಮತ್ತು ಯುಎಇಯನ್ನು ಜೀವಿಸಲು ಹಾಗೂ ಕೆಲಸ ಮಾಡಲು ಉತ್ಕಷ್ಟ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ 2019ರಲ್ಲಿ ಗೋಲ್ಡನ್ ವೀಸಾ ಯೋಜನೆಗೆ ಚಾಲನೆ ನೀಡಲಾಗಿದೆ. ‌

5 ಅಥವಾ 10 ವರ್ಷಕ್ಕೆ ಈ ವೀಸಾ ನೀಡಲಾಗುವುದು ಮತ್ತು ಇದು ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ. ಹೂಡಿಕೆದಾರರು, ಉದ್ಯಮಿಗಳು, ವಿಶೇಷ ಪ್ರತಿಭಾನ್ವಿತರು , ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುವವರು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಇದನ್ನು ಪಡೆಯಲು ಅರ್ಹರು. ಇತ್ತೀಚೆಗೆ ಈ ನಿಯಮವನ್ನು ವಿಸ್ತರಿಸಲಾಗಿದ್ದು ಮ್ಯಾನೇಜರ್ಗಳು, ಸಿಇಒ, ವಿಜ್ಞಾನ, ಇಂಜಿನಿಯರಿಂಗ್, ಆರೋಗ್ಯ, ಶಿಕ್ಷಣ, ಉದ್ಯಮ ನಿರ್ವಹಣೆ, ತಂತ್ರಜ್ಞಾನ ಕ್ಷೇತ್ರದ ಸಾಧಕರಿಗೂ ಗೋಲ್ಡನ್ ವೀಸಾ ಪಡೆಯಲು ಅನುವು ಮಾಡಲಾಗಿದೆ. 

ಈ ಬಗ್ಗೆ ಸೋಮವಾರ ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿದ ‘ನಿವಾಸಸ್ಥಾನ ಮತ್ತು ವಿದೇಶಿ ವ್ಯವಹಾರಗಳ ಸಾಮಾನ್ಯ ನಿರ್ದೇಶನಾಲಯದ’ ಪ್ರಧಾನ ನಿರ್ದೇಶಕ ಲೆ.ಜ. ಮುಹಮ್ಮದ್ ಅಹ್ಮದ್ ಅಲ್ಮರಿ, ಪ್ರತೀ ದಿನ 1,60,000 ಪ್ರಯಾಣಿಕರು ದುಬೈ ವಿಮಾನ ನಿಲ್ದಾಣವನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News