ಕೃಷಿ ಕಾಯ್ದೆ ಹಿಂಪಡೆದ ಮಾತ್ರಕ್ಕೆ ರೈತರ ಅಪನಂಬಿಕೆ ಕಡಿಮೆಯಾಗದು: ಸಚಿನ್ ಪೈಲಟ್

Update: 2021-11-23 09:20 GMT

ಹೊಸದಿಲ್ಲಿ: ಬಿಜೆಪಿಯ ಉಪಚುನಾವಣೆ ಸೋಲು ಹಾಗೂ  ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ 'ಕೆಟ್ಟ ಪ್ರದರ್ಶನ'ದ ಸುಳಿವು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆಗೆ ಕಾರಣವಾಯಿತು. ಕೃಷಿ ಕಾಯ್ದೆ ಹಿಂಪಡೆದ ಮಾತ್ರಕ್ಕೆ ರೈತರ ಅಪನಂಬಿಕೆ ಕಡಿಮೆಯಾಗದು. ಆಡಳಿತ ಪಕ್ಷಕ್ಕೆ "ಪರಿಣಾಮಗಳು" ಇರುತ್ತವೆ  ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಂಗಳವಾರ ಹೇಳಿದ್ದಾರೆ.

ರೈತರ ಬೇಡಿಕೆಯಂತೆ ಸರಕಾರವು ಕನಿಷ್ಟ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನುಬದ್ಧ ಖಾತರಿಯನ್ನು ಖಾತರಿಪಡಿಸುವುದು ಮಾತ್ರವಲ್ಲದೆ ಸಂಗ್ರಹಣೆ ನಡೆಯುವುದನ್ನು ಖಾತ್ರಿಪಡಿಸುವ ನಿಯಂತ್ರಣ ಅಥವಾ ಕಾನೂನನ್ನು ಒದಗಿಸಬೇಕು ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಹೇಳಿದರು.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪೈಲಟ್, ಸರಕಾರ ಈಗ ಏನೇ ಮಾಡಿದರೂ, ಕೃಷಿ ಕಾನೂನು ಆಂದೋಲನದಿಂದ ಬಳಲುತ್ತಿರುವ ರೈತರ ಮನಸ್ಸಿನಿಂದ ಅಪನಂಬಿಕೆ ಅಳಿಸಲು 'ತುಂಬಾ ತಡವಾಗಿದೆ' ಎಂದು ಹೇಳಿದರು.

"ಭಾರತೀಯ ಇತಿಹಾಸದಲ್ಲಿ  ಒಂದು ವರ್ಷದವರೆಗೆ ಕೃಷಿ ಸಮುದಾಯ ಇಂತಹ ಸುದೀರ್ಘ ಆಂದೋಲನವನ್ನು ನಡೆಸಿದ್ದನ್ನು ಯಾರು ನೋಡಿರಲಿಕ್ಕಿಲ್ಲ. ಈಗ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಂಡಿರುವ ಕೇಂದ್ರ ಸರಕಾರವು ರೈತರ ಜೀವನ ಮತ್ತು ಜೀವನೋಪಾಯವನ್ನು ವ್ಯರ್ಥ ಮಾಡುವ ಅಗತ್ಯ ಏನಿತ್ತು. ರೈತರನ್ನು ನಕ್ಸಲೀಯರು, ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು ಎಂದೂ ಕರೆಯಲಾಗುತ್ತಿತ್ತು ಹಾಗೂ  ಕೆಲವು ಸಚಿವರ ಸಂಬಂಧಿಕರು ರೈತರ ಮೇಲೆ ವಾಹನ ಚಲಾಯಿಸಿ ಸಾಯಿಸಿದ್ದಾರೆ" ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News