ಮಂಗಳೂರು: ಕಾಂಗ್ರೆಸ್‌ನಿಂದ ಶ್ರೀನಿವಾಸ್ ಮಲ್ಯ ಜಯಂತಿ ಆಚರಣೆ
Update: 2021-11-23 18:16 IST
ಮಂಗಳೂರು, ನ.23: ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿುಂದ ಅಭಿವೃದ್ಧಿಯ ರುವಾರಿ ಯು.ಶ್ರೀನಿವಾಸ್ ಮಲ್ಯ ಅವರ ಜನ್ಮವನ್ನು ರವಿವಾರ ಆಚರಿಸಲಾಯಿತು.
ಕದ್ರಿಯ ಜೋಗಿ ಮಠದ ಬಳಿಯ ಶ್ರೀನಿವಾಸ್ ಮಲ್ಯ ಪಾರ್ಕ್‌ನಲ್ಲಿ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಬಿ. ಸಾಲ್ಯಾನ್‌ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಕಾರ್ಪೊರೇಟರ್ ಎಂ. ಶಶಿಧರ್ ಹೆಗ್ಡೆ, ಸುರೇಂದ್ರ ಶೆಣೈ, ಚೇತನ್, ಪದ್ಮನಾಭ ಅಮೀನ್, ಯೋಗೀಶ್ ನಾಯಕ್, ಜಯರಾಮ್ ಕಾರಂದೂರ್, ಲಿಯಾಖತ್ ಶಾ, ತನ್ವಿರ್ ಶಾ, ಸಬಿತಾ ಮಿಸ್ಕಿತ್, ಮಮತಾ ಶೆಟ್ಟಿ, ವಸಂತಿ ಅಂಗಯ್ಯ, ಮಂಜುಳಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.