×
Ad

ಯಶವಂತಪುರ-ಕಾರವಾರ ರೈಲಿನ ಅವಧಿ ವಿಸ್ತರಣೆ

Update: 2021-11-23 19:15 IST
ಸಾಂದರ್ಭಿಕ ಚಿತ್ರ (PTI)

ಉಡುಪಿ, ನ.23: ವಾರದಲ್ಲಿ ಮೂರು ಬಾರಿ ಸಂಚರಿಸುವ ರೈಲು ನಂ. 16515/16516(06211/06212) ಯಶವಂತಪುರ-ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಅವಧಿಯನ್ನು ದಕ್ಷಿಣ ಪಶ್ಚಿಮ ರೈಲ್ವೆಯ ಸಹಕಾರದೊಂದಿಗೆ ವಿಸ್ತರಿಸಲಾಗಿದ್ದು, ನ.29ರಿಂದ ಅದು ಮುಂದಿನ ಪ್ರಕಟಣೆಯವರೆಗೆ ಹಿಂದಿನ ಸಮಯದಲ್ಲೇ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರಗಳಂದು ಸಂಚರಿಸುವ ರೈಲು ನಂ. 16515(06211) ಯಶವಂತಪುರ-ಕಾರವಾರ ಟ್ರೈವೀಕ್ಲಿ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ನ.29ರಿಂದ ಮುಂದಿನ ಪ್ರಕಟಣೆಯವರೆಗೆ ಮೊದಲಿನ ಸಮಯದಲ್ಲೇ ಸಂಚರಿಸುತ್ತದೆ.

ಅದೇ ರೀತಿ ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರದಂದು ಸಂಚರಿಸುತಿದ್ದ ರೈಲು ನಂ.16516(06212) ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ನ.30ರಿಂದ ಮುಂದಿನ ಪ್ರಕಟಣೆಯವರೆಗೆ ವಿಸ್ತರಿಸಲಾಗಿದೆ.

ಈ ರೈಲಿಗೆ ಹಿಂದೆ ನಿಗದಿಯಾದ ನಿಲುಗಡೆಗಳೆಲ್ಲವೂ ಇರುತ್ತದೆ. ಸುರಕ್ಷಾ ಅಂತರ, ಸ್ಯಾನಟೈಜೇಶನ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೋವಿಡ್-19 ಮಾರ್ಗಸೂಚಿಗಳೆಲ್ಲವೂ ಇದರಲ್ಲಿ ಪಾಲನೆಯಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News