×
Ad

​ಸ್ಟೇಟ್ ಟ್ರೇಡಿಂಗ್ ಕಾರ್ಪೋರೇಷನ್ ಲಿ.ಗೆ ನಿರ್ದೇಶಕರಾಗಿ ಕಾಪು ದಿವಾಕರ ಶೆಟ್ಟಿ ನೇಮಕ

Update: 2021-11-23 19:18 IST

ಉಡುಪಿ, ನ.23: ದೇಶದ ಆರ್ಥಿಕತೆಯನ್ನು ಮೇಲೆತ್ತುವ ಕೇಂದ್ರ ಸರಕಾರದ ಪ್ರಯತ್ನದ ಅಂಗವಾಗಿ ಕೇಂದ್ರ ಸ್ವಾಯತ್ತೆಯ ಎಲ್ಲಾ ಆರ್ಥಿಕ ಸಂಸ್ಥೆಗಳನ್ನು ಪುನಃಶ್ಚೇತನಗೊಳಿಸುವ ಕ್ರಮವನ್ನು ಸರಕಾರ ಕೈಗೊಳ್ಳುತ್ತಿದ್ದು ಅದರಂತೆ ಕೇಂದ್ರ ರಪ್ತು ಮತ್ತು ಆಮದು ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಸ್ಟೇಟ್ ಟ್ರೇಡಿಂಗ್ ಕಾರ್ಪೋರೇಶನ್ ಲಿ. ಆಡಳಿತ ಮಂಡಳಿಗೆ ಕೇಂದ್ರ ಸರಕಾರದ ಪ್ರತಿನಿಧಿಯಾಗಿ ದಿವಾಕರ ಶೆಟ್ಟಿ ಕಾಪು ಅವರನ್ನು ನಿರ್ದೇಶಕರನ್ನಾಗಿ 3 ವರ್ಷದ ಅವಧಿಗೆ ಕೇಂದ್ರ ಸರಕಾರ ನೇಮಿಸಿ ಆದೇಶ ಹೊರಡಿಸಿದೆ.

ದಿವಾಕರ ಶೆಟ್ಟಿ ಕಾಪು ಅವರು ಉಡುಪಿಯಲ್ಲಿ ಲೆಕ್ಕ ಪರಿಶೋಧಕ ಮತ್ತು ತೆರಿಗೆ ಸಲಹೆಗಾರರಾಗಿದ್ದು, ಪ್ರಸ್ತುತ ಬಿಜೆಪಿ ಉಡುಪಿ ಜಿಲ್ಲಾ ಆರ್ಥಿಕ ಪ್ರಕೋಷ್ಟದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News