ಗುಜರಾತ್‌: ಇನ್‌ಸ್ಟಾಗ್ರಾಮ್ ವೀಡಿಯೊ ಶೂಟ್ ಮಾಡಲು ರೈಲು ಹತ್ತಿದ್ದ ಬಾಲಕ ವಿದ್ಯುತ್ ಆಘಾತಕ್ಕೆ ಬಲಿ

Update: 2021-11-23 16:23 GMT

ಅಹಮದಾಬಾದ್: ಸಾಮಾಜಿಕ ಮಾಧ್ಯಮ ಆ್ಯಪ್ ಇನ್‌ಸ್ಟಾಗ್ರಾಮ್‌ಗಾಗಿ ವೀಡಿಯೊ ರೆಕಾರ್ಡ್ ಮಾಡಲು ರೈಲಿನ ವ್ಯಾಗನ್‌ ಮೇಲೆ ಹತ್ತಿದ ಶಾಲಾ ಬಾಲಕನೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಮ್ ಪಾಂಚಾಲ್ (15 ವರ್ಷ) ಸೋಮವಾರ ಸಂಜೆ ಸಬರಮತಿ ಯಾರ್ಡ್‌ನಲ್ಲಿ ನಿಂತಿದ್ದ ಗೂಡ್ಸ್ ರೈಲು ವ್ಯಾಗನ್‌ನ ಮೇಲಿರುವ ಹೈ ವೋಲ್ಟೇಜ್ ಓವರ್‌ಹೆಡ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ ಎಂದು ರೈಲ್ವೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

"ಪಾಂಚಾಲ್ ಇಲ್ಲಿನ ರಾನಿಪ್ ಪ್ರದೇಶಕ್ಕೆ ತನ್ನ ಸ್ನೇಹಿತನೊಂದಿಗೆ ಬಂದಿದ್ದ. ವಿದ್ಯುತ್ ಸ್ಪರ್ಶದ ಪರಿಣಾಮ ಆತ ನೆಲಕ್ಕೆ ಹಾರಿ ತಕ್ಷಣ ಸಾವನ್ನಪ್ಪಿದ್ದಾನೆ. ಪಾಂಚಾಲ್ ತನ್ನ ಮೊಬೈಲ್ ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ಗಾಗಿ ವೀಡಿಯೊ ರೆಕಾರ್ಡ್ ಮಾಡಲು ವ್ಯಾಗನ್‌ನ ಛಾವಣಿಯ ಮೇಲೆ ಹತ್ತಿದ್ದ ಎಂದು ಅವನ ಸ್ನೇಹಿತ ಹೇಳಿದ್ದಾನೆ”ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News