×
Ad

ಮಂಗಳೂರು: ಬಾಲಕಿಯ ಕೊಲೆ ಪ್ರಕರಣ; ಶಂಕಿತರ ತೀವ್ರ ವಿಚಾರಣೆ

Update: 2021-11-23 21:05 IST
ಸಾಂದರ್ಭಿಕ ಚಿತ್ರ

ಮಂಗಳೂರು, ನ.23: ಉಳಾಯಿಬೆಟ್ಟು ಸಮೀಪದ ಪರಾರಿ ಎಂಬಲ್ಲಿನ ಹೆಂಚಿನ ಕಾರ್ಖಾನೆ ಬಳಿ ಬಾಲಕಿಯ ಕೊಲೆ ಪ್ರಕರಣದ ತನಿಖೆ ಮುಂದುವರಿದಿದ್ದು, ಶಂಕಿತರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.

ರವಿವಾರ 8 ವರ್ಷದ ಬಾಲಕಿಯ ಮೃತದೇಹವು ಮೋರಿಯಲ್ಲಿ ಪತ್ತೆಯಾದ ಬಳಿಕ ಶಂಕೆಯ ಮೇರೆಗೆ ಪೊಲೀಸರು ಹಲವು ಮಂದಿಯನ್ನು ವಶಕ್ಕೆ ಪಡೆದಿದ್ದರು.

ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾದ ಕಾರಣ ಪೊಲೀಸರು ಹಲವು ಶಂಕಿತರನ್ನು ವಿಚಾರಣೆಗೊಳಪಡಿಸಿದ್ದು, ತನಿಖೆಯ ಪ್ರಗತಿಗೆ ಪೂರಕ ಮಾಹಿತಿ ಲಭಿಸಿದೆ. ಕೃತ್ಯ ಎಸಗಿದ ಆರೋಪಿಗಳನ್ನು ಶೀಘ್ರ ಬಂಧಿಸುವ ವಿಶ್ವಾಸವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News