×
Ad

ವಿಧಾನ ಪರಿಷತ್ ಚುನಾವಣೆ; 7 ಮಂದಿಯ ನಾಮಪತ್ರ ಸ್ವೀಕೃತ: ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ

Update: 2021-11-24 17:22 IST
 ಡಾ.ರಾಜೇಂದ್ರ

ಮಂಗಳೂರು, ನ.24: ದ.ಕ. ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಚುನಾಯಿತ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಡಿ.10ರಂದು ನಡೆಯುವ ಚುನಾವಣೆಗೆ ಸಲ್ಲಿಕೆಯಾಗಿದ್ದ 8 ನಾಮಪತ್ರದ ಪೈಕಿ 1 ನಾಮಪತ್ರ ತಿರಸ್ಕೃತಗೊಂಡಿದ್ದರೆ, 7 ನಾಮಪತ್ರಗಳು ಸ್ವೀಕೃತವಾಗಿದೆ.

ಬುಧವಾರ ನಾಮಪತ್ರಗಳನ್ನು ಪರಿಶೀಲಿಸಲಾಗಿದ್ದು, 8 ಮಂದಿಯ ಪೈಕಿ ಪಕ್ಷೇತರ ಅಭ್ಯರ್ಥಿ ಸುಪ್ರೀತ್ ಕುಮಾರ್ ಪೂಜಾರಿ ಅವಯ ನಾಮಪತ್ರ ತಿರಸ್ಕೃತಗೊಂಡಿದೆ. ನ.26ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ, ಎಸ್‌ಡಿಪಿಐಯ ಇಸ್ಮಾಯೀಲ್ ಶಾಫಿ ಕೆ., ಪಕ್ಷೇತರರಾದ ಬೆಳುವಾಯಿಯ ಕೌಶಿಕ್ ಡಿ.ಶೆಟ್ಟಿ, ಬೆಟ್ಟಂಪಾಡಿಯ ನವೀನ್ ಕುಮಾರ್ ರೈ, ಮಂಗಳೂರಿನ ನಿತಿನ್ ಕುಮಾರ್, ಮೂಡುಬಿದಿರೆಯ ಶಶಿಧರ ಎಂ. ಅವರ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News