ಉಚಿತ ಚಿತ್ರಕಲಾ ಕಾರ್ಯಗಾರ
ಉಡುಪಿ, ನ.24: ಸೃಜನಶೀಲತೆ, ಏಕಾಗ್ರತೆ ಮತ್ತು ಮನೋ ಚೈತನ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ 18 ರಿಂದ 75ರ ವಯೋಮಾನದವರೆಗಿನ ಕಲಾಸಕ್ತರಿಗೆ ಪೃಶಾ ಸೇವಾ ಟ್ರಸ್ಟ್, ಉಡುಪಿ-ಮಣಿಪಾಲ ಮತ್ತು ತ್ರಿವರ್ಣ ಕಲಾ ಕೇಂದ್ರ, ಮಣಿಪಾಲದ ವತಿಯಿಂದ ಚಿತ್ರಕಲಾ ಕಾರ್ಯಾಗಾರವನ್ನು ಡಿ.5ರಂದು ಬೆಳಿಗ್ಗೆ 9ರಿಂದ ಸಂಜೆ 5.30ರತನಕ ಮಣಿಪಾಲದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಗಾರದಲ್ಲಿ ರೇಖೆ, ಆಕಾರ, ರೂಪ-ಬಣ್ಣಗಳ ಬಳಕೆಯೊಂದಿಗೆ ಚಿತ್ರಕಲೆಯ ಪ್ರಾಥಮಿಕ ಜ್ಞಾನ ಮತ್ತು ವಿವಿಧ ಆಯಾಮಗಳ ಪರಿಕಲ್ಪನೆಯೊಂದಿಗೆ ಚಿತ್ರಕೃತಿಯ ಪೆನ್ಸಿಲ್ ಶೇಡಿಂಗ್ ರಚನೆಯ ಕುರಿತು ಉಚಿತ ತರಬೇತಿ ನೀಡಲಾಗುತ್ತದೆ.
ಬೇಸಿಕ್ ಮತ್ತು ಶೇಡಿಂಗ್ ಪ್ರತ್ಯೇಕ ವಿಭಾಗ ನಡೆಸುತ್ತಿದ್ದು, ಭಾಗವಹಿಸಿದ ಶಿಬಿರಾರ್ಥಿಯರಿಗೆ ಬೇಕಾಗುವ ಎಲ್ಲಾ ಕಲಾಪರಿಕರ, ಲಘು ಉಪಹಾರದ ವ್ಯವಸ್ಥೆ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಮೊದಲು ನೊಂದಾಯಿಸುವ 30 ಜನರಿಗೆ ಸೀಮಿತ ಅವಕಾಶವನ್ನು ಕಲ್ಪಿಸಿದ್ದು, ಆಸಕ್ತರು ನ.30ಒಳಗೆ ಹೆಸರನ್ನು 9741701211, 9945671113 ಕರೆಯ ಮೂಲಕ ನೊಂದಾಯಿ ಸುವಂತೆ ಪ್ರಕಟಣೆ ತಿಳಿಸಿದೆ.