×
Ad

ಕೃಷಿ ಕಾಯ್ದೆ ವಾಪಾಸು: ಮತಪ್ರದರ್ಶನದೊಂದಿಗೆ ಸ್ವಾಗತ

Update: 2021-11-24 20:21 IST

ಉಡುಪಿ, ನ.24: ವಿವಾದಾತ್ಮಕ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಅಖಿಲ ಭಾರತ ವಿಮಾ ನೌಕರರ ಸಂಘಕ್ಕೆ ಸಂಯೋಜಿತವಾಗಿರುವ ವಿಮಾ ನೌಕರರ ಸಂಘ ಉಡುಪಿ ವಿಭಾಗವು ಉಡುಪಿ ವಿಭಾಗದ ಎಲ್ಲಾ ಶಾಖಾ ಘಟಕಗಳಲ್ಲಿ ಮತಪ್ರದರ್ನ ಮಾಡುವ ಮೂಲಕ ಸ್ವಾಗತಿಸಿದೆ.

ವಿಮಾ ನೌಕರರು ಈ ಕಾಯ್ದೆ ವಿರುದ್ಧದ ರೈತರ ಚಳವಳಿಯ ಆರಂಭ ದಿಂದಲೂ ತಮ್ಮ ಬೆಂಬಲವನ್ನು ದೇಶದಾದ್ಯಂತ ನೀಡುತ್ತ ಬಂದಿದ್ದಾರೆ. ದೇಶದಾದ್ಯಂತ ನಮ್ಮ ಸದಸ್ಯರು ಆರ್ಥಿಕ ಬೆಂಬಲದೊಂದಿಗೆ ನೈತಿಕ ಬೆಂಬಲ ವನ್ನೂ ನೀಡಿದ್ದಾರೆ. ಅದೇ ರೀತಿಯಲ್ಲಿ ವಿಮಾ ನೌಕರರ ಸಂಘ, ಉಡುಪಿ ವಿಭಾಗವು ಕೂಡಾ ಈ ಚಳವಳಿಗೆ ಬೆಂಬಲವನ್ನೂ ನೀಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್ ಮತ್ತು ಅಧ್ಯಕ್ಷ ಕೆ.ವಿಶ್ವನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News