×
Ad

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಸ್ರೂರು ರಾಜೀವ ಶೆಟ್ಟಿ ಮರು ನೇಮಕ

Update: 2021-11-24 20:22 IST

ಉಡುಪಿ, ನ.24: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ಸಭಾಪತಿಯಾಗಿ ಬಸ್ರೂರು ರಾಜೀವ ಶೆಟ್ಟಿ ಮರು ನೇಮಕಗೊಂಡಿದ್ದು, ಅವರಿಗೆ ತಲ್ಲೂರು ಶಿವರಾಮ ಶೆಟ್ಟಿ ಅವರು ಅಧಿಕೃತಾಗಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

ಈ ಕುರಿತು ರಾಜ್ಯ ಉಚ್ಛ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಕಳೆದ ವರ್ಷ ನ.12ರಂದು ಉಡುಪಿ ಜಿಲ್ಲಾಧಿಕಾರಿ ಅವರು ಹೊರಡಿಸಿದ ಆದೇಶವನ್ನು ಸಂಪೂರ್ಣ ಅಸಿಂಧುಗೊಳಿಸಿ ಬಸ್ರೂರು ರಾಜೀವ್ ಶೆಟ್ಟಿ ಅವರನ್ನು ರೆಡ್‌ಕ್ರಾಸ್ ಜಿಲ್ಲಾ ಘಟಕಕ್ಕೆ ಸಾಪತಿಯಾಗಿ ಮರುಸ್ಥಾಪನೆಗೊಳಿಸಿತ್ತು.

ರಾಜೀವ್ ಶೆಟ್ಟಿ ಅವರ ಸ್ಥಾನಕ್ಕೆ ಸಭಾಪತಿಯಾಗಿದ್ದ ತಲ್ಲೂರು ಶಿವರಾಮ ಶೆಟ್ಟಿ, ಉಚ್ಛ ನ್ಯಾಯಾಲಯದ ತೀರ್ಪಿಗೆ ಗೌರವ ಹಾಗೂ ಮನ್ನಣೆ ಕೊಡದೆ ಕಾನೂನು ನಿಂದನೆ ಮಾಡಿದ್ದಾಗಿ ಬಸ್ರೂರು ರಾಜೀವ್ ಶೆಟ್ಟಿ ಇದೇ ಜು.31ರಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕಾನೂು ನಿಂದನೆ ಪ್ರಕರಣ ದಾಖಲಿಸಿದ್ದರು.

ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ವೀರಪ್ಪ ಮತ್ತು ನ್ಯಾಯಾಧೀಶೆ ರೇಖಾ ಅವರು ಕಾನೂನು ನಿಂದನೆ ಪ್ರಕರಣದಲ್ಲಿ ತಲ್ಲೂರು ಶಿವರಾಮ ಶೆಟ್ಟಿ, ಎಸ್ ನಾಗಣ್ಣ ಮತ್ತು ಜಿ. ಜಗದೀಶ್ ಇವರುಗಳ ಮೇಲೆ ನ್ಯಾಯಾಂಗ ನಿಂದನಾ ಪ್ರಕರಣ ಆದೇಶದ ಬಗ್ಗೆ ನ.18ರ ಅಪರಾಹ್ನ ಅಪರಾಹ್ನ 2:30ರ ಒಳಗೆ ಬಸ್ರೂರು ರಾಜೀವ್ ಶೆಟ್ಟಿ ಅವರಿಗೆ ಸಭಾಪತಿ ಸ್ಥಾನವನ್ನು ಅಧಿಕೃತವಾಗಿ ಹಸ್ತಾಂತರಿಸಿ, ಅವರ ಸಭಾಪತಿ ಸ್ಥಾನ ಸ್ವೀಕಾರ ಒಪ್ಪಿಗೆ ಪತ್ರವನ್ನು ಪಡೆದು ಈ ದಾಖಲೆಗಳನ್ನು ನ್ಯಾಯಾಲಯಕ್ಕೆ ಕೋರ್ಟಿಗೆ ಹಸ್ತಾಂತರಿಸುಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು.

ನ್ಯಾಯಾಲಯದ ಆದೇಶದ ಗಂಭೀರತೆಯನ್ನು ಅರಿತುಕೊಂಡ ತಲ್ಲೂರು ಶಿವರಾಮ ಶೆಟ್ಟಿ ಅವರು ನ.18ರ ಅಪರಾಹ್ನ 2:00ಗಂಟೆಗೆ ರೆಡ್‌ಕ್ರಾಸ್ ಕಛೇರಿಗೆ ಬಂದು ಬಸ್ರೂರು ರಾಜೀವ್ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಅವರ ಒಪ್ಪಿಗೆ ಪತ್ರವನ್ನು ಉಚ್ಛ ನ್ಯಾಯಾಲಯಕ್ಕೆ ತಲುಪಿಸಿದ್ದರು. ಅದರಂತೆ 2020ರ ನ.12ರಂದು ಪೂರ್ವಾನ್ವಯವಾಗುವಂತೆ ಮುಂದಿನ ಮೂರು ವರ್ಷ ಅವಧಿ (4.10.2022ರವರೆಗೆ) ಸಭಾಪತಿ ಕಾರ್ಯವನ್ನು ಮುಂದುವರಿಸಿ ಕೊಂಡು ಹೋಗುವಂತೆ ರಾಜೀವ್ ಶೆಟ್ಟಿ ಅವರಿಗೆ ಉಚ್ಛ ನ್ಯಾಯಾಲಯ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News