×
Ad

ಉಡುಪಿ ಸಹಿತ ಕರಾವಳಿಗೆ ನಾಸಿಕ್‌ನಿಂದ ಟೊಮ್ಯಾಟೊ ಪೂರೈಕೆ

Update: 2021-11-24 20:30 IST

ಉಡುಪಿ, ನ.24: ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಭಾರೀ ಮಳೆಯಿಂದ ಟೊಮ್ಯಾಟೊ ಕೊರತೆ ಹಾಗೂ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಮಹಾರಾಷ್ಟ್ರ ರಾಜ್ಯದ ನಾಸಿಕ್‌ನಿಂದ ಟೊಮ್ಯಾಟೊ ಇಂದು ಪೂರೈಕೆ ಆಗಿದೆ. ಇದರಿಂದ ಟೊಮ್ಯಾಟೊ ದರ ಕೆ.ಜಿ.ಗೆ 120ರೂ.ನಿಂದ 80-90ರೂ.ಗೆ ಇಳಿಕೆಯಾಗಿದೆ.

ಈವರೆಗೆ ಕೊರತೆಯ ಮಧ್ಯೆಯೂ ಚಿಕ್ಕಮಗಳೂರು, ಶಿವಮೊಗ್ಗದಿಂದ ಟೊಮ್ಯಾಟೊ ಉಡುಪಿ ಜಿಲ್ಲೆಗೆ ಸರಬರಾಜು ಆಗುತ್ತಿತ್ತು. ದುಬಾರಿ ಬೆಲೆಯಲ್ಲಿ ಖರೀದಿಸಿದ ಟೊಮ್ಯಾಟೊವನ್ನು ವ್ಯಾಪಾರಿಗಳು ಕೆ.ಜಿ.ಗೆ 100-120ರೂ.ಗೆ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ದೂರದ ನಾಸಿಕ್‌ನಿಂದ ಕರ್ನಾಟಕ ಕ್ಕಿಂತ ಕಡಿಮೆ ದರದಲ್ಲಿ ಟೊಮ್ಯಾಟೊ ಸರಬರಾಜು ಆಗಿದ್ದು, ಇದನ್ನು ವ್ಯಾಪಾರಿ ಗಳು ಇಂದಿನಿಂದ ಕೆ.ಜಿ.ಗೆ 80-90ರೂ.ಗೆ. ಮಾರಾಟ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಟೊಮ್ಯಾಟೊ ದರ ಏರಿಕೆ ಆದಾಗ ಪ್ರತಿ ಬಾರಿ ನಾಸಿಕ್‌ನಿಂದ ಟೊಮ್ಯಾಟೊ ನಮ್ಮ ಜಿಲ್ಲೆಗೆ ಸರಬರಾಜು ಆಗುತ್ತದೆ. ಇಲ್ಲಿ ಕಡಿಮೆ ದರ ಇರು ವಾಗ ನಾಸಿಕ್‌ನಿಂದ ಟೊಮ್ಯಾಟೊ ತರಿಸಿದರೆ ಬಹಳಷ್ಟು ದುಬಾರಿ ಆಗುತ್ತದೆ. ನಾಸಿಕ್‌ನಿಂದ ಉಡುಪಿಗೆ 24ಗಂಟೆಗಳ ಸಂಚಾರ ಅವಧಿ ಇರುವುದರಿಂದ ಟೊಮ್ಯಾಟೊ ದರ ಜಾಸ್ತಿ ಆಗಿರುತ್ತದೆ. ಇಂದಿನಿಂದ ಜಿಲ್ಲೆಯ ಎಲ್ಲ ಕಡೆಗಳಿಗೆ ನಾಸಿಕ್ ಟೊಮ್ಯಾಟೊ ಪೂರೈಕೆ ಆಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

ತರಕಾರಿಗಳು ಮತ್ತಷ್ಟು ದುಬಾರಿ: ಜಿಲ್ಲೆಯಾದ್ಯಂತ ತರಕಾರಿ ದರಗಳು ಇಂದು ಮತ್ತಷ್ಟು ದುಬಾರಿಯಾಗಿವೆ. ಕೆಲವೊಂದು ತರಕಾರಿ ದರ ಶೇ.50ರಷ್ಟು ಏರಿಕೆ ಯಾದರೆ ಇನ್ನು ಕೆಲವು ತರಕಾರಿಗಳ ಬೆಲೆ ಶೇ.30ರಷ್ಟು ಜಾಸ್ತಿಯಾಗಿದೆ.

ಬೀನ್ಸ್ ಕೆ.ಜಿ.ಗೆ 80ರೂ., ತೊಂಡೆಕಾಯಿ ಕೆ.ಜಿ.ಗೆ 100ರೂ., ಸೌತೆಕಾಯಿ ಕೆ.ಜಿ.ಗೆ 50ರೂ., ಸೊರೆಕಾಯಿ ಕೆ.ಜಿ.ಗೆ 50-60ರೂ., ಬೀಟ್ರೋಟ್ ಕೆ.ಜಿ.ಗೆ 60ರೂ., ತೊಂಡೆ ಮೆಣಸು ಕೆ.ಜಿ.ಗೆ 100ರೂ., ಹೀರೆ ಕಾಯಿ ಕೆ.ಜಿ.ಗೆ 80 ರೂ., ಹೂವು ಕೋಸು ಕೆ.ಜಿ.ಗೆ 60ರೂ.ಗೆ ಏರಿಕೆಯಾಗಿದೆ ಎಂದು ಉಡುಪಿ ತರಕಾರಿ ಮಾರುಕ್ಟೆಯ ವ್ಯಾಪಾರಿ ಹಫೀಝ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News