ಉಡುಪಿ ಸಿಎ ಶಾಖೆಗೆ ಅತ್ಯುತ್ತಮ ಶಾಖಾ ಪ್ರಶಸ್ತಿ

Update: 2021-11-24 15:03 GMT

ಉಡುಪಿ, ನ.24: ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಉಡುಪಿ ಶಾಖೆ ಹಾಗೂ ಉಡುಪಿ ಸಿಕಾಸ 2020ನೇ ಸಾಲಿನ ಅತ್ಯುತ್ತಮ ಶಾಖಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಕೊಯಮತ್ತೂರು ಲೆ ಮೆರಿಡಿಯನ್‌ನಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ 53ನೇ ವರ್ಷದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ 2020-21ನೇ ಸಾಲಿನ ಶಾಖಾ ಅಧ್ಯಕ್ಷ ಸಿಎ ಪ್ರದೀಪ ಜೋಗಿ ಹಾಗೂ ಪ್ರಸ್ತುತ ಸಾಲಿನ ಶಾಖಾ ಅಧ್ಯಕ್ಷೆ ಸಿಎ ಕವಿತಾ ಎಂ. ಪೈ ಟಿ. ಪ್ರಶಸ್ತಿಗಳನ್ನು ಸ್ವಿಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News