​ದ.ಕ. ಜಿಲ್ಲೆಯಲ್ಲಿ ಮುಂದುವರಿದ ಮಳೆ

Update: 2021-11-24 15:13 GMT

ಮಂಗಳೂರು, ನ.24: ದ.ಕ.ಜಿಲ್ಲೆಯ ಬಹುತೇಕ ಕಡೆ ಮಂಗಳವಾರ ತಡರಾತ್ರಿ ಗುಡುಗು ಸಹಿತ ಮಳೆ ಸುರಿದಿದೆ. ಬುಧವಾರ ಹಗಲು ವೇಳೆ ಬಿಸಿಲ ವಾತಾವರಣವಿತ್ತು. ಸಂಜೆಯ ಬಳಿಕ ಮೋಡ ಕವಿಯುತ್ತಲೇ ಮಳೆಯಾಗಿದೆ.

ಕರಾವಳಿಯಲ್ಲಿ ಇನ್ನೂ ಎರಡು ದಿನ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿದೆ.

ಪುತ್ತೂರು ತಾಲೂಕಿನ ಮುಡ್ನೂರು, ಬಡಗನ್ನೂರು, ಆರ್ಯಾಪು, ಉಪ್ಪಿನಂಗಡಿ, ಕಡಬ ತಾಲೂಕಿನ ಕಡಬ, ಕೊಲ, ಬೆಳ್ತಂಗಡಿ ತಾಲೂಕಿನ ನಿಡ್ಲೆ, ಆಳದಂಡಿ, ಇಳಂತಿಳ, ಧರ್ಮಸ್ಥಳ, ಇಂದಬೆಟ್ಟು, ಅರಸಿನಮಕ್ಕಿ, ಮೂಡುಬಿದಿರೆ ತಾಲೂಕಿನ ಹೊಸಬೆಟ್ಟು, ಪುತ್ತಿಗೆ, ತೆಂಕಮಿಜಾರು, ಕಲ್ಲಮುಂಡ್ಕೂರು, ವಾಲ್ಪಾಡಿ, ಸುಳ್ಯ ತಾಲೂಕಿನ ಬಾಳಿಲ, ಜಾಲ್ಸೂರು, ಕಲ್ಮಂಜ, ಮಂಡೆಕೋಲು, ಬಂಟ್ವಾಳ ತಾಲೂಕಿನ ಬಂಟ್ವಾಳ, ವಿಟ್ಲ, ಮಂಗಳೂರು ನಗರ, ಹೊರವಲಯದ ಸುರತ್ಕಲ್, ಕಿನ್ನಿಗೋಳಿ, ತೊಕ್ಕೊಟ್ಟು, ಬಜ್ಪೆ ಮತ್ತಿತರ ಕಡೆಗಳಲ್ಲಿ ಸಾಮಾನ್ಯ ಮಳೆಯಾಗಿದೆ.

ಕೆಲವು ಕಡೆಗಳಲ್ಲಿ ಗಾಳಿ ಬೀಸಿದ ಪರಿಣಾಮ ಮರದ ಕೊಂಬೆಗಳು ಮುರಿದು ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬೆಳ್ತಂಗಡಿಯಲ್ಲಿ 2.4 ಮಿ.ಮೀ., ಬಂಟ್ವಾಳದಲ್ಲಿ 1.8, ಮಂಗಳೂರಿನಲ್ಲಿ 0.9, ಪುತ್ತೂರಿನಲ್ಲಿ 11.5, ಸುಳ್ಯದಲ್ಲಿ 18.1, ಮೂಡುಬಿದಿರೆಯಲ್ಲಿ 1.7, ಕಡಬದಲ್ಲಿ 7.7 ಮಿ.ಮೀ ಸಹಿತ ಸರಾಸರಿ 6.1 ಮಿ.ಮೀ. ಮಳೆಯಾಗಿದೆ.

ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 32ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News