×
Ad

​ಮಂಗಳೂರು: ಆನ್‌ಲೈನ್ ಮೂಲಕ ವಂಚನೆ

Update: 2021-11-24 20:45 IST

ಮಂಗಳೂರು, ನ.24: ಆನ್‌ಲೈನ್ ಮೂಲಕ ಹಣ ಸಂಪಾದನೆ ಮಾಡುವ ಬಗ್ಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ಬಳಿಕ 1.31 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತನೋರ್ವ ವ್ಯಕ್ತಿಯೊಬ್ಬರಿಗೆ ವಾಟ್ಸ್‌ಆ್ಯಪ್ ಸಂದೇಶ ಮೂಲಕ ವೆಬ್‌ಸೈಟ್‌ವೊಂದರ ಲಿಂಕ್ ಕಳುಹಿಸಿ ಅದರಲ್ಲಿ ನೋಂದಣಿ ಮಾಡಿ ಆನ್‌ಲೈನ್‌ನಲ್ಲಿ ಹಣ ಸಂಪಾದನೆ ಮಾಡಬಹುದು ಎಂದು ತಿಳಿಸಿದ್ದರು. ಅದನ್ನು ನಂಬಿದ ವ್ಯಕ್ತಿಯು ಖಾತೆ ತೆರೆದು ತನ್ನ ಬ್ಯಾಂಕ್ ಖಾತೆಯಿಂದ 200 ರೂ. ಪಾವತಿಸಿದ್ದರು. ಅನಂತರ ವೆಬ್‌ಸೈಟ್‌ನ ಲಿಂಕ್ ಕಳುಹಿಸಿದ ಅಪರಿಚಿತನು ತಾನು ಇದರ ಬೋನಸ್ ನೀಡುವೆ. ಅದಕ್ಕಾಗಿ ಇನ್ನಷ್ಟು ಮೊತ್ತ ಕಳುಹಿಸಿಕೊಡಲು ವ್ಯಕ್ತಿಗೆ ತಿಳಿಸಿದನು.

ಅದನ್ನು ಕೂಡ ನಂಬಿದ ವ್ಯಕ್ತಿಯು ಕಳೆದ ಎ.14ರಿಂದ ಎ.25ರ ಮಧ್ಯೆ ಹಂತ ಹಂತವಾಗಿ 1,31,481 ರೂ.ಗಳನ್ನು ಪಾವತಿಸಿದ್ದರು. ಆದರೆ ಅವರಿಗೆ ಯಾವುದೇ ಬೋನಸ್ ಅಥವಾ ಪಾವತಿಸಿದ ಹಣವನ್ನು ವಾಪಸ್ ನೀಡದೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News