ಸ್ವ ಉದ್ಯೋಗಕ್ಕಾಗಿ ಸಾಲ ಸೌಲಭ್ಯ
Update: 2021-11-24 21:41 IST
ಮಂಗಳೂರು, ನ.24: ಸ್ವಉದ್ಯೋಗ ಮಾಡಲು ಇಚ್ಛಿಸುವ ದ.ಕ. ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಪಿಎಂಇಜಿಪಿ ಯೋಜನೆಯಡಿ ಬ್ಯಾಂಕುಗಳ ಮೂಲಕ ಸಾಲ ಅಥವಾ ಸಹಾಯಧನ ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ (PMEGP website: www/kviconline.gov.in/pmegpeportal ಅರ್ಜಿಗಳನ್ನು ಸಲ್ಲಿಸಬಹದು.
ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಎಯ್ಯಿಡಿ ಕೈಗಾರಿಕಾ ವಲಯ (ದೂ.ಸಂ: 0824-2214021)ವನ್ನು ಸಂರ್ಪಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.