×
Ad

ಮಂಗಳೂರು: ನ.25ರಂದು ವಿದ್ಯುತ್ ವ್ಯತ್ಯಯ

Update: 2021-11-24 21:42 IST

ಮಂಗಳೂರು, ನ.24: ನಗರದ ನೆಹರೂ ಮೈದಾನದ ಉಪಕೇಂದ್ರದಿಂದ ಹೊರಡುವ ಮಾರ್ಕೆಟ್ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಹಾಗಾಗಿ ನ.25ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಗರದ ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗ, ಪಿಎಂರಾವ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ಕಟೀಲು, ಪೆರ್ಮುದೆ: ನಗರದ ಎಂ.ಎಸ್.ಇ.ಝೆಡ್ ಉಪಕೇಂದ್ರದಿಂದ ಹೊರಡುವ ಕಟೀಲು ದೇವಸ್ಥಾನ, ಪೆರ್ಮುದೆ ಮತ್ತು ಬಜಪೆ ನಗರ ಫೀಡರ್‌ಗಳಲ್ಲಿ ಜಂಪರ್‌ ಬದಲಾವಣೆಯಿರುವ ಕಾರಣ ನ.25ರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಪೆರ್ಮುದೆ, ಭಟ್ರಕೆರೆ, ಕಣಿಕಟ್ಟೆ, ಹುಣ್ಸೆಕಟ್ಟೆ, ತೆಂಕಎಕ್ಕಾರು, ಎಕ್ಕಾರು, ಬಜಪೆ, ಕಿನ್ನಿಪದವು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ನಂದಿಕೂರು/ಮುಲ್ಕಿ: ನಂದಿಕೂರು-ಮುಲ್ಕಿ ಉಪಕೇಂದ್ರದಲ್ಲಿ ಹಾಗೂ ನಂದಿಕೂರು-ಮುಲ್ಕಿ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಾಗಾರಿ ನಡೆಯಲಿರುವುದರಿಂದ ನಂದಿಕೂರು-ಮುಲ್ಕಿ ವಿದ್ಯುತ್ ಮಾರ್ಗ ಹಾಗೂ ಬಳ್ಕುಂಜೆ ವಿದ್ಯುತ್ ಮಾರ್ಗದಲ್ಲಿ ಮುಲ್ಕಿ, ಕೆ.ಎಸ್.ರಾವ್ ನಗರ, ಕೊಳ್ನಾಡು ಕೈಗಾರಿಕಾ ವಲಯ, ಚಿತ್ರಾಪು, ಬಪ್ಪನಾಡು, ಕುಬೆಪೂರು, ಐಕಳ, ಉಲ್ಲಂಜೆ, ಕವತ್ತಾರು, ಪಂಜಿನಡ್ಕ, ದಾಮಸ್‌ ಕಟ್ಟೆ, ಎಸ್ಕೋಡಿ, ಪಕ್ಷಿಕೆರೆ, ಹಳೆಯಂಗಡಿ, ಇಂದಿರಾನಗರ, 10ನೇ ತೋಕೂರು, ಪಾವಂಜೆ, ಚೇಳಾರು, ಬಳ್ಕುಂಜೆ ವಾಟರ್ ಸಪ್ಲೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News