ಸಿರಿಯಾದ ಮೇಲೆ ಇಸ್ರೇಲ್ ವಾಯುದಾಳಿ: ಇಬ್ಬರು ಮೃತ್ಯು, 7 ಮಂದಿಗೆ ಗಾಯ

Update: 2021-11-24 18:13 GMT
ಸಾಂದರ್ಭಿಕ ಚಿತ್ರ;PTI

ಡಮಾಸ್ಕಸ್, ನ.23: ಸಿರಿಯಾದ ಕೇಂದ್ರ ವಲಯದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು 7 ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾದ ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ವಲಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವಾಯುದಾಳಿ ನಡೆಸಿದೆ. ಹೋಮ್ಸ್ ನಗರದ ಮೇಲೆ ನಡೆಸಿದ ದಾಳಿಯನ್ನು ಸಿರಿಯಾದ ವಾಯುರಕ್ಷಣಾ ವ್ಯವಸ್ಥೆ ಹಿಮ್ಮೆಟ್ಟಿಸಿದೆ ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ಸನಾ ವರದಿ ಮಾಡಿದೆ. ಸಿರಿಯಾದ ಮೇಲೆ ಹಲವು ವರ್ಷಗಳಿಂದ ಹಲವಾರು ವಾಯುದಾಳಿ ನಡೆಸಿರುವ ಇಸ್ರೇಲ್, ಬುಧವಾರದ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಧ್ಯಮಗಳು ಹೇಳಿವೆ.

ಕಳೆದ ವಾರ ದಮಾಸ್ಕಸ್‌ನ ದಕ್ಷಿಣದ ಗೊಲಾನ್ ಹೈಟ್ಸ್ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿತ್ತು. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದಕ್ಕೂ ಮುನ್ನ ಪೂರ್ವದಲ್ಲಿರುವ ಹೋಮ್ಸ್ ನಗರ ಹಾಗೂ ಕರಾವಳಿ ತೀರದ ಟಾರ್ಟೋಸ್ ನಗರದ ಮೇಲೆಯೂ ಇಸ್ರೇಲ್ ವಾಯುದಾಳಿ ನಡೆಸಿದೆ ಎಂದು ಸಿರಿಯಾ ಹೇಳಿದೆ.

ಸಿರಿಯಾದಲ್ಲಿ ನೆಲೆ ಕಂಡುಕೊಂಡಿರುವ ಇರಾನ್ ಬೆಂಬಲಿತ ಸಶಸ್ತ್ರ ಸಂಘಟನೆಯನ್ನು ಗುರಿಯಾಗಿಸಿ ವಾಯುದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಸಮರ್ಥಿಸಿಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News