ಡಿ.9 ರವರೆಗೆ ಎನ್ ಸಿಬಿ ಅಧಿಕಾರಿ, ಅವರ ಕುಟುಂಬದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ: ಬಾಂಬೆ ಹೈಕೋರ್ಟಿಗೆ ತಿಳಿಸಿದ ಮಲಿಕ್

Update: 2021-11-25 12:32 GMT

ಮುಂಬೈ: ಆರ್ಯನ್ ಖಾನ್ ಪ್ರಕರಣದಿಂದ ಆರಂಭಿಸಿ ಸುಲಿಗೆ ಹಾಗೂ  ಫೋರ್ಜರಿ ಆರೋಪಗಳ ತನಕ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಡಿಸೆಂಬರ್ 9 ರವರೆಗೆ ವಾಂಖೆಡೆ ಕುಟುಂಬದ ವಿರುದ್ಧ ಹೇಳಿಕೆ ನೀಡುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ವಾಂಖೆಡೆ ಅವರ ತಂದೆ ಧ್ಯಾನ್‌ದೇವ್ ವಾಂಖೆಡೆ ಹೇಳಿರುವಂತೆ 'ದುರುದ್ದೇಶಪೂರಿತ' ವಿಷಯವನ್ನು ಪೋಸ್ಟ್ ಮಾಡುವುದನ್ನು ಮುಂದುವರಿಸಬಾರದು ಎಂದು  ನ್ಯಾಯಾಲಯದ ವಿಭಾಗೀಯ ಪೀಠವು ತನ್ನ ಆದೇಶದಲ್ಲಿ ಎಚ್ಚರಿಕೆ ನೀಡಿದ ನಂತರ ಮಲಿಕ್  ಈ ಭರವಸೆ ನೀಡಿದರು.

ಬಾಂಬೆ ಹೈಕೋರ್ಟ್ ನ  ಏಕಸದಸ್ಯ ಪೀಠವು ಸೋಮವಾರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಧ್ಯಾನದೇವ್ ವಾಂಖೆಡೆ ಅವರು ಬಾಂಬೆ ಹೈಕೋರ್ಟ್‌ಗೆ ಮೊರೆ ಹೋದ ನಂತರ ಎನ್‌ಸಿಪಿ ನಾಯಕನ ಭರವಸೆ ಬಂದಿದೆ.

ಆ ಆದೇಶದಲ್ಲಿ ನ್ಯಾಯಾಲಯವು ಮಲಿಕ್ ಅವರು ಸಮೀರ್ ವಾಂಖೆಡೆ, ಅವರ ತಂದೆ ಹಾಗೂ  ಕುಟುಂಬದ ಬಗ್ಗೆ ವಿಷಯವನ್ನು ಪ್ರಕಟಿಸಲು ಮುಕ್ತರಾಗಿದ್ದಾರೆ. ಆದರೆ ಸತ್ಯಗಳ ಸಮಂಜಸವಾದ ಪರಿಶೀಲನೆಯ ನಂತರ ಮಾತ್ರ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News