ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಮಾಹಿತಿ ಒದಗಿಸಲು ಸೂಚನೆ
Update: 2021-11-25 21:19 IST
ಮಂಗಳೂರು, ನ.25: 2020ರ ಮಾ.1ರಿಂದ ಈವರೆಗೆ ಕೋವಿಡ್-19 ಸೋಂಕಿನಿಂದಾಗಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಅಥವಾ ಒಬ್ಬ ಹೆತ್ತವರು ಕೋವಿಡ್‌ನಿಂದ ಹಾಗೂ ಇನ್ನೊಬ್ಬರನ್ನು ಇತರೆ ಕಾರಣದಿಂದ ಕಳೆದುಕೊಂಡ ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆ ಮತು ಪಿಎಂ ಕೇರ್ಸ್ ಫಾರ್‌ಚಿಲ್ಡ್ರನ್ ಯೋಜನೆಯಡಿ 23 ವರ್ಷಗಳು ತುಂಬುವವರೆಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಆದ್ದರಿಂದ ಇಂತಹ ಮಕ್ಕಳ ಮಾಹಿತಿ ದೊರೆತಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂ. ಸಂ: 0824-2440004, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ದೂ. ಸಂ: 0824-2451254 ಹಾಗೂ ಚೈಲ್ಡ್‌ಲೈನ್-1098 (ದ.ಕ.ಜಿಲ್ಲೆ) ಗೆ ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.