ಉಡುಪಿಯಲ್ಲಿ ಕಳವಾದ ವಾಹನ ಉಪ್ಪಿನಂಗಡಿಯಲ್ಲಿ ಪತ್ತೆ
Update: 2021-11-25 21:32 IST
ಉಪ್ಪಿನಂಗಡಿ: ಉಡುಪಿಯ ಕಚೇರಿ ಬಳಿ ನಿಲ್ಲಿಸಲಾಗಿದ್ದ ನ್ಯಾಯವಾದಿಯೋರ್ವರ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ಕಳವುಗೈದು ಅದರಲ್ಲಿದ್ದ ಇಂಧನ ಮುಗಿಯುತ್ತಿದ್ದಂತೆಯೇ ಉಪ್ಪಿನಂಗಡಿ ಸಮೀಪದ 34 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಎಂಬಲ್ಲಿರಿಸಿ ದುಷ್ಕರ್ಮಿಗಳು ಪರಾರಿಯಾದ ಘಟನೆ ವರದಿಯಾಗಿದೆ.
ನ್ಯಾಯವಾದಿ ನಿರ್ಮಲಾ ಪೈ ಎಂಬವರ ದ್ವಿಚಕ್ರ ವಾಹನ ನ. 21 ರಂದು ಕಳವುಗೈಯಲ್ಪಟ್ಟಿದ್ದು, ನ. 24 ರಂದು 34 ನೇ ನೆಕ್ಕಿಲಾಡಿಯ ಬೊಳ್ಳಾರ್ ಎಂಬಲ್ಲಿ ಹೊಂಡಾ ಆಕ್ಟೀವಾವೊಂದು ಅನಾಥವಾಗಿರುವ ಬಗ್ಗೆ ಸ್ಥಳೀಯರಿಂದ ದೊರೆತ ಮಾಹಿತಿಯನ್ನು ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ ಪೊಲೀಸರ ಗಮನಕ್ಕೆ ತಂದಿದ್ದರು. ವಾಹನ ನೋಂದಣಿ ಸಂಖ್ಯೆಯನ್ನು ಆಧರಿಸಿ ಅದರ ಮಾಲಕರನ್ನು ಸಂಪರ್ಕಿಸಿದಾಗ ವಾಹನ ಕಳವಿಗೀಡಾಗಿರುವುದು ದೃಢಪಟ್ಟಿತ್ತು.