ಫಲಾಹ್ ಪ್ರೌಢಶಾಲೆಯಲ್ಲಿ ವಿಜ್ಞಾನ ಮಾದರಿ ಪ್ರದರ್ಶನ

Update: 2021-11-25 16:24 GMT

ತಲಪಾಡಿ:  ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ನಡೆದ ವಿಜ್ಞಾನದ ಆಕರ್ಷಕ ಮಾದರಿಗಳ ಪ್ರದರ್ಶನವನ್ನು ಫಲಾಹ್ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಜಿ ಯು.ಬಿ ಮೊಹಮ್ಮದ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಲಪಾಡಿ ಹಾಗೂ ಪಿಲಾರು ಕ್ಲಸ್ಟರ್ಗಳ ಸಂಪನ್ಮೂಲ ವ್ಯಕ್ತಿ ಹರೀಶ್ ಕುಮಾರ್  ಆಕರ್ಷಕ ಮಾದರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಹಾರೈಸಿದರು.

ಈ ಸಂದರ್ಭ ಸಂಸ್ಥೆಯ ಕೋಶಾಧಿಕಾರಿ ಹಾಜಿ  ಕೆ.ಎಂ ಅಬ್ಬಾಸ್ ಮಜಲ್, ಫಲಾಹ್ ಮದ್ರಸದ ಮುಖ್ಯ  ಅಧ್ಯಾಪಕರಾದ ಮುಸ್ತಫಾ ಕಮಾಲ್,  ಮುಖ್ಯ ಶಿಕ್ಷಕ ಮಹಮ್ಮದ್ ರಫೀಕ್, ಇಕೋ ಕ್ಲಬ್ ನೋಡೆಲ್ ಶಿಕ್ಷಕಿ ಲತಾ ಪಿ, ಹಿರಿಯ ಶಿಕ್ಷಕಿಯರಾದ ಐರಿನ್ ರೋಡ್ರಿಗಸ್ ಹಾಗೂ ಸಾಧನಾ ರಾವ್ ಬಿ, ದೈಹಿಕ ಶಿಕ್ಷಣ ಶಿಕ್ಷಕರಾದ ಭರತ್ ಎಂ, ಚಿತ್ರಕಲಾ ಶಿಕ್ಷಕ ನವೀನ್ ಪ್ರಸಾದ್ ಮೊಂತೆರೋ  ಉಪಸ್ಥಿತರಿದ್ದರು.

ಶಿಕ್ಷಕಿ ಚಂದ್ರಕಲಾ ಎಂ ಸ್ವಾಗತಿಸಿ, ವನಿತಾ ಕೆ ರವರು ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News