ಡಿ.1ರಿಂದ ಭಾರತ ಸಹಿತ ಆರು ದೇಶಗಳಿಂದ ನೇರ ಪ್ರವೇಶಕ್ಕೆ ಸೌದಿ ಅರೇಬಿಯ ಅವಕಾಶ

Update: 2021-11-25 17:55 GMT
ಸಾಂದರ್ಭಿಕ ಚಿತ್ರ (PTI)

ರಿಯಾದ್: ಭಾರತ, ಇಂಡೋನೇಶ್ಯ, ಪಾಕಿಸ್ತಾನ ಹಾಗೂ ಈಜಿಪ್ಟ್ ಸಹಿತ ಆರು ದೇಶಗಳಿಗೆ ಮೂರನೇ ದೇಶದಲ್ಲಿ 14 ದಿನಗಳ ಕ್ವಾರಂಟೈನ್ ನಲ್ಲಿ ಕಳೆಯದೇ ನೇರವಾಗಿ ದೇಶದೊಳಗೆ ಪ್ರವೇಶಿಸಲು ಅವಕಾಶ ನೀಡುವುದಾಗಿ ಸೌದಿ ಅರೇಬಿಯ ಘೋಷಿಸಿದೆ ಎಂದು saudigazette.com ವರದಿ ಮಾಡಿದೆ. 

ಹೊಸ ನಿರ್ದೇಶನವು ಡಿಸೆಂಬರ್ 1, 2021 ರಿಂದ ಜಾರಿಗೆ ಬರಲಿದೆ ಎಂದು ಆಂತರಿಕ ಸಚಿವಾಲಯದ ಅಧಿಕೃತ ಮೂಲವನ್ನು ಉಲ್ಲೇಖಿಸಿ ಸೌದಿ ಪ್ರೆಸ್ ಏಜೆನ್ಸಿಯು ವರದಿ ಮಾಡಿದೆ.

ಬ್ರೆಝಿಲ್ ಹಾಗೂ  ವಿಯೆಟ್ನಾಂ ನೇರ ಪ್ರವೇಶಕ್ಕೆ ಅನುಮತಿಸಿದ ದೇಶಗಳ ಹೊಸ ಪಟ್ಟಿಯಲ್ಲಿರುವ ಇನ್ನೆರಡು ದೇಶಗಳಾಗಿವೆ.

ಈ ದೇಶಗಳಿಂದ ಬಂದವರೆಲ್ಲರೂ ಕೊರೋನ ವಿರುದ್ಧ ಲಸಿಕೆ ಪಡೆದಿದ್ದರೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಐದು ದಿನಗಳ ಕಾಲ ಕಳೆಯಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News