ಸಂವಿಧಾನವೆಂದರೆ ಮೀಸಲಾತಿ ಅಲ್ಲ, ಬದುಕು: ಜಯನ್ ಮಲ್ಪೆ

Update: 2021-11-26 14:39 GMT

ಮಲ್ಪೆ, ನ.26: ಸಂವಿಧಾನ ಅಂದರೆ ಮೀಸಲಾತಿ ಮತ್ತು ದಲಿತರಿಗೆ ಸೌಲಭ್ಯ ಅಂತ ತಿಳಿದುಕೊಂಡಿದ್ದಾರೆ. ಇದು ತಪ್ಪುಕಲ್ಪನೆ. ಸಂವಿಧಾನದಲ್ಲಿ ಸಾಮಾಜಿಕ ವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಎಲ್ಲಾ ಧರ್ಮದ ಜನರಿಗೆ ಬದುಕುವ ಘನತೆಯನ್ನು ತಂದುಕೊಟ್ಟಿದೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮಲ್ಪೆಸರಸ್ವತಿ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಲಾದ ಸಂವಿಧಾನ ಅರ್ಪಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಮ್ಮ ಸಂವಿಧಾನ ಉಳಿದರೆ ನಮ್ಮ ದೇಶದ ಸಮಗ್ರತೆ, ಸಂಸ್ಕೃತಿ ಮತ್ತು ಜನರ ಬದುಕು ಉಳಿಯುತ್ತದೆ. ಆದರೆ ನಮ್ಮನ್ನು ಆಳುವವರು ಸಂವಿಧಾನದೊಳಗೊಂದು ಸಂವಿಧಾನ ರೂಪಿಸುತ್ತಿದ್ದಾರೆ. ಇದು ಈ ನೆಲದ ಜನರ ದುರಂತ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಮತ್ತು ಭಾಂದವ್ಯವನ್ನು ನೀಡುವ ಸಂವಿಧಾನವನ್ನು ನಾವು ಉಳಿಸದಿದ್ದರೆ ನಾವೆಲ್ಲರೂ ನಾಶವಾಗುವುದು ಖಂಡಿತ ಎಂದರು.

ಅಂಬೇಡಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡರಾದ ಸಂತೋಷ್ ಕಪ್ಪೆಟ್ಟು, ಶಶಿಕಲಾ ತೊಟ್ಟಂ, ಮಂಜುನಾಥ ಕಪ್ಪೆಟ್ಟು, ಗುಣವಂತ ತೊಟ್ಟಂ, ದಯಾನಂದ ಎಸ್.ಕಪ್ಪೆಟ್ಟು, ಕೃಷ್ಣ ಶ್ರೀಯಾನ್, ದಿನೇಶ್ ಜವನೆರಕಟ್ಟೆ, ಭಗವನ್ ದಾಸ್, ಮಹೇಶ್ ಚಂಡ್ಕಳ, ದೀಪಕ್ ಕೊಡವೂರು, ಸುರೇಶ್ ಚಿಟ್ಪಾಡಿ, ರಾಮ್ ತೆಕ್ಕಟ್ಟೆ, ಜಯರಾಜ್, ರವಿ ಲಕ್ಷ್ಮಿನಗರ, ಪ್ರಶಾಂತ್ ಬಿ.ಎನ್., ಅಶೋಕ್ ನೆರ್ಗಿ, ಪ್ರಸಾದ್ ಮಲ್ಪೆ, ಪ್ರಮೀಳ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

ಗಣೇಶ್ ನೆರ್ಗಿ ಸ್ವಾಗತಿಸಿದರು. ರಮೋಜಿ ತಿಂಗಳಾಯ ವಂದಿಸಿದರು. ಶುಶಿಲ್ ಕುಮಾರ್ ಕೂಡವೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News