×
Ad

ಪ್ರೊ.ನಾರಾಯಣಾಚಾರ್ಯರ ನಿಧನಕ್ಕೆ ಪೇಜಾವರಶ್ರೀ ಸಂತಾಪ

Update: 2021-11-26 21:12 IST

ಉಡುಪಿ, ನ.26: ನಾಡಿನ ಬಹುಶ್ರುತ ವಿದ್ವಾಂಸ ಪ್ರೊ.ಕೆ.ಎಸ್. ನಾರಾಯಣಾಚಾರ್ಯರ ನಿಧನಕ್ಕೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸುಧೀರ್ಘ ಅವಧಿಯ ಸಾಹಿತ್ಯ ಕೃಷಿ, ಶಾಸ್ತ್ರಾಧ್ಯಯ, ಅಮೂಲ್ಯ ಕೃತಿ ರಚನೆ, ಸಂಶೋಧನೆಯೇ ಮೊದಲಾಗಿ, ತಮ್ಮ ಅಂಕಣಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ರೀತಿಯಲ್ಲಿ ವಿಮರ್ಶಿಸುತಿದ್ದ ಆಚಾರ್ಯರ ವಾಙ್ಮಯ ಕೊಡುಗೆಗಳು ಸದಾ ನಮ್ಮ ಸ್ಮರಣೆಯಲ್ಲಿರುತ್ತವೆ ಎಂದು ಪೇಜಾವರಶ್ರೀ  ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News