ನ.27ರಂದು ರಂಗನಿರ್ದೇಶಕ ರಘುನಂದನ್ ರಿಂದ ಉಪನ್ಯಾಸ
Update: 2021-11-26 21:13 IST
ಮಣಿಪಾಲ, ನ.26: ಖ್ಯಾತ ಬರಹಗಾರ ಹಾಗೂ ರಂಗ ನಿರ್ದೇಶಕರಾದ ಎಸ್.ರಘುನಂದನ್ ಇವರಿಂದ ಶೇಕ್ಸ್‌ಪಿಯರ್ ಅವರ ‘ರೋಮಿಯೋ- ಜೂಲಿಯೆಟ್ ಮತ್ತು ಮ್ಯಾಕ್‌ಬೆತ್’ ನಾಟಕಗಳ ಕುರಿತ ವಿದ್ವತ್ಪೂರ್ಣ ಉಪನ್ಯಾಸವು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ ಆಶ್ರಯದಲ್ಲಿ ನ.27ರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಕಾರ್ಯಕ್ರಮ ಮೈಕ್ರೋಸಾಫ್ಟ್ ಟೀಮ್ಸ್‌ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ತಿಳಿಸಿದ್ದಾರೆ.