×
Ad

‘ಮಾಮ್’ ನೂತನ ಅಧ್ಯಕ್ಷರಾಗಿ ನವೀನ್ ಅಮ್ಮೆಂಬಳ ಆಯ್ಕೆ

Update: 2021-11-26 22:29 IST

ಮಂಗಳೂರು, ನ.26: ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆದಿದ್ದು, ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಮಾಮ್ ನೂತನ ಅಧ್ಯಕ್ಷರಾಗಿ ನವೀನ್ ಅಮ್ಮೆಂಬಳ, ಗೌರವಾಧ್ಯಕ್ಷರಾಗಿ ವೇಣು ಶರ್ಮ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಸಫಿಯಾ, ಕೋಶಾಧಿಕಾರಿಯಾಗಿ ಕೃಷ್ಣ ಕಿಶೋರ್, ಉಪಾಧ್ಯಕ್ಷರಾಗಿ ಚಂದ್ರಶೇಖರ ಕುಳಮರ್ವ, ಕಾರ್ಯದರ್ಶಿಗಳಾಗಿ ಹರೀಶ್ ಮೋಟುಕಾನ ಮತ್ತು ಪ್ರಶಾಂತ್ ಸುವರ್ಣ, ಕಾರ್ಯಕ್ರಮ ಸಂಯೋಜಕರಾಗಿ ತಾರಾ ಆಯ್ಕೆಯಾದರು.

ಮಾಮ್ ಇನ್‌ಸ್ಪೈರ್ ಅವಾರ್ಡ್ ಸಂಚಾಲಕರಾಗಿ ಶರತ್ ಹೆಗ್ಡೆ ಕಡ್ತಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೇಣು ವಿನೋದ್ ಕೆ.ಎಸ್., ಸುರೇಶ್ ಪುದುವೆಟ್ಟು, ಕೃಷ್ಣ ಮೋಹನ ತಲೆಂಗಳ, ಸುರೇಶ್ ಡಿ. ಪಳ್ಳಿ, ಹರೀಶ ಕುಲ್ಕುಂದ, ವಿನೋದ್ ರಾಜ್ ಕೆ., ಮೇಘಲಕ್ಷ್ಮಿ, ಸಂತೋಷ್ ವರ್ಕಾಡಿ, ಅಹ್ಮದ್ ಬಾವಾ, ಮಹಾಂತೇಶ್ ಹಿರೇಮಠ, ರಾಜೇಶ್ ಫೆರಾವೊ, ಧೀರಜ್ ಪೊಯ್ಯೆಕಂಡ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News