'ಪುರುಷೋತ್ತಮನ ಪ್ರಸಂಗ' ಸಿನಿಮಾಕ್ಕೆ ಚಾಲನೆ
Update: 2021-11-26 22:33 IST
ಮಂಗಳೂರು : ರಾಷ್ಟ್ರಕೂಟ ಪಿಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ನಿರ್ಮಾಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ನಿರ್ಮಿಸುವ 'ಪುರುಷೋತ್ತಮನ ಪ್ರಸಂಗ' ಸಿನಿಮಾಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ದೇವಸ್ಥಾನದ ಅನುವಂಶಿಕ ಅರ್ಚಕ ಲಕ್ಷ್ಮಿನಾರಾಯಣ ಅಸ್ರಣ್ಣ ಶುಭ ಹಾರೈಸಿದರು. ಉದ್ಯಮಿ ಬಿ.ಆರ್. ಶೆಟ್ಟಿ, ನಿರ್ಮಾ ಪಕರಾದ ವಿ. ರವಿ ಕುಮಾರ್, ಶಂಸುದ್ದೀನ್, ಎಚ್.ಕೆ. ಪ್ರಕಾಶ್‌ಗೌಡ, ಅಜಯ್ ಪೃಥ್ವಿ, ರಿಷಿಕಾ ನಾಯ್ಕ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಗಿರೀಶ್ ಎಂ.ಶೆಟ್ಟಿ ಕಟೀಲು, ವಾಲ್ಟರ್ ನಂದಳಿಕೆ, ದಿನೇಶ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಸಾಯಿಕೃಷ್ಣ, ಭೋಜರಾಜ ವಾಮಂಜೂರು, ಉಪಸ್ಥಿತರಿದ್ದರು.
ನಿರ್ದೇಶಕ ದೇವದಾಸ ಕಾಪಿಕಾಡ್ ಸ್ವಾಗತಿಸಿದರು. ಆದಿತ್ಯರಾಜ್ ಕಾರ್ಯಕ್ರಮ ನಿರೂಪಿಸಿದರು.