×
Ad

ಭಟ್ಕಳ: ವಿದ್ಯಾರ್ಥಿಗಳಿಗೆ ತಂಗುದಾಣ ಕಲ್ಪಿಸುವಂತೆ ಮನವಿ

Update: 2021-11-26 22:55 IST

ಭಟ್ಕಳ: ತಾಲೂಕಿನ ಕಾಯ್ಕಿಣಿ ಬಸ್ತಿಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ತಂಗುದಾಣದ ವ್ಯವಸ್ಥೆ ಕಲ್ಪಿಸುವ ಕುರಿತು ಭಟ್ಕಳ ಯುವ ಕಾಂಗ್ರೆಸ್ ಹಾಗೂ ಸ್ಥಳೀಯ ಸಾರ್ವಜನಿಕರು ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸ್ತಿ ಗ್ರಾಮದ ಮಧ್ಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯು ಹಾದು ಹೋಗಿದ್ದು, ಬಸ್ಸು ಹಾಗೂ ಇತರೆ ಖಾಸಗಿ ವಾಹನದ ಪ್ರಯಾಣಕ್ಕಾಗಿ ಸುತ್ತಮುತ್ತಲಿನ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆದ್ದಾರಿಯನ್ನು ಅವಲಂಬಿಸಬೇಕಾಗಿದ್ದು ಇದಕ್ಕಾಗಿ ವಿದ್ಯಾರ್ಥಿಗಳಿಗೆ ಸೂಕ್ತ ತಂಗುದಾಣದ ವ್ಯವಸ್ಥೆ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ. 

ಗ್ರಾಮೀಣ ಪ್ರದೇಶಗಳಿಂದ ಭಟ್ಕಳ ನಗರದ ವಿವಿಧ ಪ್ರಾರ್ಥಮಿಕ ಮತ್ತು ಪ್ರೌಢಶಾಲೆಗೆ ತೆರಳುವ ಮಕ್ಕಳು ಹೆದ್ದಾರಿಯಲ್ಲಿಯೇ ಸರ್ಕಾರಿ ಬಸ್ಸಿಗಾಗಿ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ. ದೂರದ ಊರುಗಳಿಗೆ ಪ್ರಯಾಣಿಸುವವರು ಸರ್ಕಾರಿ ಬಸ್ಸು ಮತ್ತು ಖಾಸಗಿ ವಾಹನಕ್ಕಾಗಿ ಕೆಲವೊಮ್ಮೆ ಅಧಿಕ ಸಮಯದವರೆಗೆ ಉರಿಬಿಸಿಲು ಅಥವಾ ಸುರಿವ ಮಳೆಗಾಳಿಯಲ್ಲಿ ಹೆದ್ದಾರಿಯ ಬದಿಯಲ್ಲಿ ನಿಲ್ಲುತ್ತಿದ್ದಾರೆ. ಇದರಿಂದಾಗಿ ಹೆದ್ದಾರಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಅಧಿಕವಾಗಿದೆ. ಬಸ್ತಿಯ ಸುತ್ತಮುತ್ತಲಿನ ಹೆರಾಡಿ, ತರಮಕ್ಕಿ, ಸಭಾತಿ, ಉತ್ತರಕೊಪ್ಪ, ದೇವಿಖಾನ, ಗುಮ್ನಹಕ್ಕು, ಕೈಕೀಣಿ ಗ್ರಾಮಸ್ಥರ ಮತ್ತು ವಿದ್ಯಾರ್ಥಿಗಳ ಮಾತ್ರ ಸಮಸ್ಯೆಯಾಗಿರದೆ ಇದೊಂದು ಸಾರ್ವಜನಿಕ ಸಮಸ್ಯೆಯೆಂದು ಪರಿಗಣಿಸಿ ಜಿಲ್ಲಾಧಿಕಾರಿಗಳು ತಕ್ಷಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ವ್ಯವಸ್ಥಿತವಾದ ಬಸ್ ತಂಗುದಾಣದ ವ್ಯವಸ್ಥೆಯನ್ನ ಕಲ್ಪಿಸಿಕೊಡಬೇಕಾಗಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ವಿಷ್ಣು ದೇವಾಡಿಗ, ಸುಧಾಕರ ನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ದಯಾನಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News