ಕೃಷ್ಣಾಪುರ: ಎಸ್ಸೆಸ್ಸೆಫ್ ರಾಜ್ಯ ಪ್ರತಿಭೋತ್ಸವಕ್ಕೆ ಚಾಲನೆ

Update: 2021-11-26 17:47 GMT

ಮಂಗಳೂರು, ನ.26: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಕೃಷ್ಣಾಪುರದಲ್ಲಿ ಆಯೋಜಿಸಿದ ರಾಜ್ಯ ಪ್ರತಿಭೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಿದರು.

ಈ ಸಂದರ್ಭ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕೃಷ್ಣಾಪುರ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹಿಂ ಮುಸ್ಲಿಯಾರ್, ಸೈಯದ್ ಹಬೀಬುಲ್ಲಾಹ್ ತಂಙಳ್ ಪೆರುವಾಯಿ ಅಬೂಸುಫ್ಯಾನ್ ಮದನಿ, ಮಂಜನಾಡಿ ಅಲ್ ಮದೀನಾದ ಖಾದರ್ ಸಖಾಫಿ, ಮಾಜಿ ಶಾಸಕ ಮೊಯ್ದಿನ್ ಬಾವ, ಪ್ರತಿಭೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಅಲ್‌ಹಾಜ್ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ, ಸುಲ್ತಾನ್ ಗೋಲ್ಡ್‌ನ ಅಬ್ದುರ್ರವೂಫ್, ಸುಫ್ಯಾನ್ ಸಖಾಫಿ, ಕೃಷ್ಣಾಪುರ ಕೇಂದ್ರ ಜುಮಾ ಮಸೀದಿಯ ಖತೀಬ್ ಫಾರೂಕ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಅಬ್ದುಲ್ ಸತ್ತಾರ್, ಮಾಜಿ ಕಾರ್ಪೊರೇಟರ್ ಅಯಾಝ್, ಹಕೀಂ ಫಾಲ್ಕಾನ್ ಹಮೀದ್, ರಫೀಕ್ ಮಾಸ್ಟರ್, ಅಶ್ರಫ್ ಅಲ್ ಬದ್ರಿಯ, ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ಪ್ರತಿಭೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ. ಮುಸ್ತಫಾ ನಈಮಿ ಹಾವೇರಿ ಸ್ವಾಗತಿಸಿದರು. ಹುಸೈನ್ ಸಅದಿ ಹೊಸ್ಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News