ಸಂಸತ್ತಿನಲ್ಲಿ ಸೋಮವಾರ ಕೃಷಿ ಕಾನೂನು ರದ್ದುಪಡಿಸುವ ಮಸೂದೆ ಮಂಡನೆ; ಎಲ್ಲ ಲೋಕಸಭಾ ಸಂಸದರಿಗೆ ವಿಪ್ ನೀಡಿದ ಬಿಜೆಪಿ

Update: 2021-11-27 05:10 GMT

ಹೊಸದಿಲ್ಲಿ: ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಸೋಮವಾರ ಎಲ್ಲರೂ ಹಾಜರಿರುವಂತೆ ಆಡಳಿತಾರೂಢ ಬಿಜೆಪಿಯು ತನ್ನ ಲೋಕಸಭೆಯ ಸಂಸದರಿಗೆ ವಿಪ್ ಜಾರಿ ಮಾಡಿದೆ ವರದಿ ndtv.com ಮಾಡಿದೆ.

ಬಿಜೆಪಿ ತನ್ನ ರಾಜ್ಯಸಭಾ ಸಂಸದರಿಗೆ ಈ ಹಿಂದೆ ವಿಪ್ ಜಾರಿ ಮಾಡಲಾಗಿತ್ತು. ಕಳೆದ ರಾತ್ರಿ ಕಾಂಗ್ರೆಸ್ ತನ್ನ ಎಲ್ಲಾ ಸಂಸದರಿಗೆ (ಲೋಕಸಭೆ ಮತ್ತು ರಾಜ್ಯಸಭೆ) ಮೂರು ಸಾಲಿನ ವಿಪ್ ಜಾರಿ ಮಾಡಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನವು ಸೋಮವಾರದಿಂದ ಆರಂಭವಾಗುತ್ತದೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆ ಅಂಗೀಕರಿಸಲು ಪಟ್ಟಿ ಮಾಡಲಾಗಿದೆ. ವಿವಾದಾತ್ಮಕ ಕ್ರಿಪ್ಟೋಕರೆನ್ಸಿ ಬಿಲ್ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸರಕಾರದ ಪಾಲನ್ನು ಶೇಕಡಾ 51 ರಿಂದ ಕೇವಲ 26 ಪ್ರತಿಶತಕ್ಕೆ ತಗ್ಗಿಸಲು ಮಸೂದೆಯನ್ನು ಮಂಡಿಸಲಾಗುತ್ತದೆ.

ಕಳೆದ ವರ್ಷದ ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟ ಹಾಗೂ  ತೀವ್ರ ಪ್ರತಿಭಟನೆಗೆ ಒಳಗಾದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಈ ವಾರ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News