ಮೀನುಗಳು ಲಕ್ಷ್ಮೀ ದೇವಿಯ ಸಹೋದರಿಯರು ಎಂದ ಕೇಂದ್ರ ಸಚಿವ

Update: 2021-11-27 12:41 GMT
ಪರಶೋತ್ತಮ್ ರುಪಾಲ (Photo: indiatoday.in)

ಹೊಸದಿಲ್ಲಿ: "ಮೀನುಗಳನ್ನು ಲಕ್ಷ್ಮೀ ದೇವಿಯ ಸಹೋದರಿಯರೆಂದು ತಿಳಿಯಬೇಕು,'' ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಶೋತ್ತಮ್ ರುಪಾಲ ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.

ಗುಜರಾತ್‍ನ ವಡಾಲ ಎಂಬಲ್ಲಿ ಆತ್ಮನಿರ್ಭರ್ ಗ್ರಾಮ್ ಯಾತ್ರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

"ಮೀನುಗಾರಿಕಾ ಕ್ಷೇತ್ರದ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ ಹಾಗೂ ಜನರೂ ಹೆಚ್ಚು ಆಸಕ್ತಿ ತೋರಿಲ್ಲ. ಸಮುದ್ರವು ಲಕ್ಷ್ಮೀ ದೇವಿಯ ತಂದೆಯ ಮನೆಯಾಗಿದೆ ಎಂಬುದು ನಿಮಗೆ ತಿಳಿದಿರಬೇಕು. ಆಕೆ ಸಮುದ್ರದ ಮಗಳು. ಲಕ್ಷ್ಮಿ ಹೇಗೆ ಸಮುದ್ರದ ಮಗಳೋ ಹಾಗೆಯೇ ಸಮುದ್ರದಲ್ಲಿರುವ ಮೀನುಗಳು ಸಮುದ್ರದ ಪುತ್ರಿಯರು.  ಆದುದರಿಂದ ಒಂದು ವಿಧದಲ್ಲಿ ಮೀನು ಲಕ್ಷಿಯ ಸಹೋದರಿ. ನಿಮಗೆ ಲಕ್ಷ್ಮಿಯ ಆಶೀರ್ವಾದ ಬೇಕಿದ್ದರೆ ನೀವು ಆಕೆಯ ಸಹೋದರಿಯ ಆಶೀರ್ವಾದವನ್ನೂ ಪಡೆಯಬೇಕು ದೇವರು ಒಮ್ಮೆ ಮತ್ಸ್ಯದ ರೂಪದಲ್ಲಿಯೂ ಕಾಣಿಸಿಕೊಂಡಿದ್ದಾರೆ,'' ಎಂದು ಹೇಳಿ ಜನರಿಗೆ ಪಶುಸಂಗೋಪನೆ ಮತ್ತು ಮತ್ಸ್ಯೋದ್ಯಮದಲ್ಲಿ ತೊಡಗಲು ಅವರು ಪ್ರೋತ್ಸಾಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News