ದರ ಏರಿಕೆ: ಏರ್ ಟೆಲ್, ವೊಡಾಫೋನ್ ಐಡಿಯಾ ಬಳಿಕ ಈಗ ಜಿಯೊ ಸರದಿ

Update: 2021-11-28 16:56 GMT
Photo: PTI

ಹೊಸದಿಲ್ಲಿ: ವೊಡಾಫೋನ್ ಐಡಿಯಾ ಲಿಮಿಟೆಡ್ ಮತ್ತು ಭಾರ್ತಿ ಏರ್‍ಟೆಲ್ ಮಾರ್ಗವನ್ನು ಅನುಸರಿಸಿರುವ ರಿಲಯನ್ಸ್ ಜಿಯೊ ಇನ್ಫೋಕಾಂ ಲಿಮಿಟೆಡ್ ಇದೀಗ, ಪ್ರಿಪೇಯ್ಡ್ ಶುಲ್ಕವನ್ನು ಶೇಕಡ 20ರಷ್ಟು ಹೆಚ್ಚಿಸಿರುವುದನ್ನು ಘೋಷಿಸಿದೆ. 2021ರ ಡಿಸೆಂಬರ್ ಒಂದರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಸುಸ್ಥಿರ ದೂರಸಂಪರ್ಕ ಉದ್ಯಮವನ್ನು ಮತ್ತಷ್ಟು ಬಲಗೊಳಿಸುವ ಬದ್ಧತೆಯೊಂದಿಗೆ ಹೊಸ ಅಪರಿಮಿತ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ಕಂಪನಿ ಘೋಷಿಸಿದೆ.

ಪ್ರಸ್ತುತ ಇರುವ 75 ರೂಪಾಯಿಯ ಪ್ಲಾನ್ ಶುಲ್ಕ ಡಿಸೆಂಬರ್ 1ರಿಂದ 91 ರೂಪಾಯಿಗೆ ಹೆಚ್ಚಲಿದೆ. ಅಂದರೆ ಏರಿಕೆ ಶೇಕಡ 20ಕ್ಕಿಂತ ಅಧಿಕ. 129 ರೂಪಾಯಿಯ ಯೋಜನೆ 155 ರೂಪಾಯಿಗೆ, 399 ರೂಪಾಯಿ ಯೋಜನೆ 479ಕ್ಕೆ, 1299ರ ಯೋಜನೆ 1559ಕ್ಕೆ ಮತ್ತು 2399ರ ಯೋಜನೆ 2879 ರೂಪಾಯಿ ಆಗಲಿದೆ.

ಅಂತೆಯೇ 6 ಜಿಬಿ ಡಾಟಾ ಟಾಪ್-ಅಪ್ ದರ ಹಾಲಿ ಇರುವ 51 ರೂಪಾಯಿ ಬದಲಾಗಿ 61 ರೂಪಾಯಿ ಆಗಲಿದೆ. 12 ಜಿಬಿ ದರ 101 ರಿಂದ 121 ರೂಪಾಯಿ, 50 ಜಿಬಿ ದರ 251ರಿಂದ 301 ರೂಪಾಯಿಗೆ ಹೆಚ್ಚಲಿದೆ.

ಎಲ್ಲ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆಗಳು ಒಂದು ವಾರದ ಅವಧಿಯಲ್ಲೇ ದರ ಹೆಚ್ಚಿಸಿವೆ. ಏರ್‍ಟೆಲ್ ನವೆಂಬರ್ 22ರಂದು ಶೇಕಡ 25ರಷ್ಟು ದರ ಹೆಚ್ಚಿಸಿದರೆ, ವೊಡಾಫೋನ್ ಐಡಿಯಾ ನವೆಂಬರ್ 25ರಿಂದ ಅನ್ವಯವಾಗುವಂತೆ ದರ ಹೆಚ್ಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News