ಎಸ್ಸೆಸ್ಸೆಫ್ ರಾಜ್ಯ ಪ್ರತಿಭೋತ್ಸವ ಸಮಾರೋಪ : ದ.ಕ.ವೆಸ್ಟ್ ಚಾಂಪಿಯನ್

Update: 2021-11-28 17:43 GMT

ಮಂಗಳೂರು, ನ.28: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ವತಿಯಿಂದ ಕೃಷ್ಣಾಪುರ ಶಾಲಾ ಮೈದಾನದಲ್ಲಿ ನಡೆದ ಮೂರು ದಿನಗಳ ರಾಜ್ಯಮಟ್ಟದ ‘ಪ್ರತಿಭೋತ್ಸವ 2021’ ರವಿವಾರ ಸಮಾಪನಗೊಂಡಿತು.

ಪ್ರತಿಭೋತ್ಸವದಲ್ಲಿ ಒಟ್ಟು 68 ಸ್ಪರ್ಧೆಗಳು ನಡೆದಿದ್ದು, 700ರಷ್ಟು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ದ.ಕ. ವೆಸ್ಟ್ ವಿಭಾಗ ಚಾಂಪಿಯನ್ ಪಟ್ಟ ಗಳಿಸಿದರೆ, ದ.ಕ. ಈಸ್ಟ್ ರನ್ನರ್ ಅಪ್ ಸ್ಥಾನಗಳಿಸಿತು.

ಸಮಾರೋಪ ಸಮಾರಂಭವನ್ನು ಸುನ್ನೀ ಜಂಇಯ್ಯತುಲ್ ಉಲಮಾದ ಪ್ರ.ಕಾರ್ಯದರ್ಶಿ ಹುಸೈನ್ ಸಅದಿ ಕೆ.ಸಿ.ರೋಡ್ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಹಬೀಬುಲ್ಲಾಹ್ ತಂಙಳ್ ಪೆರುವಾಯಿ ಅವರಿಗೆ ಸುನ್ನೀ ಸಾಹಿತ್ಯ ಪ್ರಸ್ತಿಯನ್ನು ಪ್ರದಾನ ಮಾಡಲಾಯಿತು.
ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ ಅಭಿನಂದನಾ ಭಾಷಣ ಮಾಡಿದರು. ಕೃಷ್ಣಾಪುರ ಖಾಝಿ ಇಬ್ರಾಹೀಂ ಮುಸ್ಲಿಯಾರ್, ಬಂಟ್ವಾಳ ಎಸ್.ಪಿ.ಹಂಝ ಸಖಾಫಿ, ಜಿ.ಎಂ.ಕಾಮಿಲ್ ಸಖಾಫಿ, ಹಾಜಿ ಬಿ.ಎಂ.ಮುಮ್ತಾಝ್ ಅಲಿ, ಕಸಾಪ ನೂತನ ಜಿಲ್ಲಾಧ್ಯಕ್ಷ ಡಾ.ಎಂ. ಶ್ರೀನಾಥ್, ಮಾತನಾಡಿ ಶುಭ ಹಾರೈಸಿದರು.

ಇಶಾರ ಸಂಪಾದಕ ಹಮೀದ್ ಬಜ್ಪೆ, ಎಸ್ಸೆಸ್ಸೆಫ್ ಮಾಜಿ ರಾಜ್ಯಾಧ್ಯಕ್ಷ ಇಸ್ಮಾಯೀಲ್ ಸಖಾಫಿ, ಕೆಸಿಎಫ್ ನಾಯಕರಾದ ನಿಝಾಮಿ, ಬಶೀರ್ ತಲಪಾಡಿ ಮುಂತಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ಪ್ರ.ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಸ್ವಾಗತಿಸಿದರು. ಪ್ರತಿಭೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ. ಮುಸ್ತಫ ನಈಮಿ ಕಾರ್ಯಕ್ರಮ ನಿರೂಪಿಸಿದರು. ವಾಜಿದ್ ಹಾಸನ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News