ಪಂಚಗಂಗಾ ಎಕ್ಸ್‌ಪ್ರೆಸ್ ಸಂಚಾರ ಸಮಯದಲ್ಲಿ ವ್ಯತ್ಯಯ

Update: 2021-11-29 14:36 GMT

ಉಡುಪಿ, ನ.29: ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ಹಾಗೂ ಕಾರವಾರ ನಡುವೆ ಪ್ರತಿದಿನ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಸಮಯದಲ್ಲಿ ಡಿ.1ರಿಂದ ಅಲ್ಪ ವ್ಯತ್ಯಯ ಉಂಟಾಗಲಿದೆ.

ಪ್ರತಿದಿನ ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ನಿಗದಿತ ಸಮಯ ಸಂಜೆ 6:40ಕ್ಕೆ ಹೊರಡುವ ರೈಲು ಸುರತ್ಕಲ್ (ಬೆಳಗಿನ ಜಾವ 3:56) ಹಾಗೂ ಮುಲ್ಕಿ (4:12ಕ್ಕೆ) ಹಿಂದಿನ ಸಮಯಕ್ಕೆ ತಲುಪಲಿದೆ. ಆದರೆ ಉಡುಪಿ ನಿಲ್ದಾಣಕ್ಕೆ ಮೂರು ನಿಮಿಷ ಮುಂಚಿತವಾಗಿ -ಹಿಂದಿನ 4:38ಕ್ಕೆ ಬದಲು 4:35ಕ್ಕೆ- ತಲುಪಲಿದೆ.

ನಂತರ ಉಡುಪಿಯಿಂದ ಕಾರವಾರದ ನಡುವೆ ನಿಲುಗಡೆ ಇರುವ ಎಲ್ಲಾ ನಿಲ್ದಾಣಗಳಲ್ಲೂ ತಲಾ ಎರಡು ನಿಮಿಷ ನಿಲ್ಲಲಿದೆ. ಆದರೆ ನಿಲ್ದಾಣಕ್ಕೆ ಬರುವ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಬಾರಕೂರು- 4:54ಕ್ಕೆ ಬದಲು 4:50ಕ್ಕೆ, ಕುಂದಾಪುರ- 5:12ಕ್ಕೆ ಬದಲು 5:05ಕ್ಕೆ, ಮೂಕಾಂಬಿಕಾ ರೋಡ್ ಬೈಂದೂರು- 5:38ಕ್ಕೆ ಬದಲು 5:26ಕ್ಕೆ, ಭಟ್ಕಳ-5:54ಕ್ಕೆ ಬದಲು 5:48ಕ್ಕೆ, ಮುರ್ಡೇಶ್ವರ- 6:12ಕ್ಕೆ ಬದಲು 6:04ಕ್ಕೆ, ಹೊನ್ನಾವರ-6:34ಕ್ಕೆ ಬದಲು 6:24ಕ್ಕೆ, ಕುಮಟ- 6:48ಕ್ಕೆ ಬದಲು 6:42ಕ್ಕೆ, ಗೋಕರ್ಣ ರೋಡ್- 7:08ಕ್ಕೆ ಬದಲು 6:57ಕ್ಕೆ, ಅಂಕೋಲ- 7:20ಕ್ಕೆ ಬದಲು 7:10ಕ್ಕೆ ತಲುಪುವ ರೈಲು ಕಾರವಾರಕ್ಕೆ ಬೆಳಗ್ಗೆ 8:25ಕ್ಕೆ ತಲುಪಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News