ನವೀಕರಣಗೊಂಡ ಸಭಾಭವನ ಉಡುಪಿ ಜಿಲ್ಲಾಧಿಕಾರಿ ಉದ್ಘಾಟನೆ

Update: 2021-11-29 16:06 GMT

ಉಡುಪಿ, ನ.29: ಸರಕಾರದ ಅನುದಾನವಿಲ್ಲದೇ ದಾನಿಗಳ ನೆರನೊಂದಿಗೆ ಸಾವನದ ನಿರ್ಮಾಣ ಕಾರ್ಯವನ್ನು ಅತ್ಯಲ್ಪ ಅವಧಿ ಯಲ್ಲಿಯೇ ನವೀಕರಣಗೊಳಿಸಿರುವುದು ಪ್ರಶಂಸನೀಯ ಕಾರ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ. ಉಡುಪಿ ಬನ್ನಂಜೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವೀಕರಣ ಗೊಂಡ ಶ್ರೀಮಹಾಲಿಂಗೇಶ್ವರ ಸಭಾಭವವನ್ನು ಸೋಮವಾರ ಉ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ ಬನ್ನಂಜೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವೀಕರಣ ಗೊಂಡ ಶ್ರೀಮಹಾಲಿಂಗೇಶ್ವರ ಸಾವವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ನಗರದಮಧ್ಯಭಾಗದಲ್ಲಿರುವ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸಭಾಭವನವನ್ನು, ದಾನಿಗಳು ಹಾಗೂ ಭಕ್ತರ ಸಹಕಾರದೊಂದಿಗೆ ಕಡಿಮೆ ಅವಧಿಯಲ್ಲಿಯೇ, ಸುಂದರ, ಸುಸಜ್ಜಿತವಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನೊಳಗೊಂಡು ನವಿವಕರಣ ಮಾಡಿರುವುದು ಮನೋಬಲ ಮತ್ತು ಪ್ರಬಲ ಇಚ್ಛಾಕ್ತಿಯನ್ನು ತೋರುತ್ತದೆ ಎಂದರು.

ದಾನಿಗಳಾದ ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಅಮೃತಾ ಶೆಟ್ಟಿ ಹಾಗೂ ಗ್ರಾಸ್‌ಲ್ಯಾಂಡ್ ಡೆವಲಪರ್ಸ್‌ನ ನೀತ್ ಎಸ್. ಅಮೀನ್ ಬನ್ನಂಜೆ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಇಂಜಿನಿಯರ್ ಪ್ರವೀಣ್ ಹೆಗ್ಡೆ, ಸುರೇಶ್ ನಾಣಯ್ಯ ಹಾಗೂ ದೇವಳದ ಆಡಳಿತಾಧಿಕಾರಿ ಡಾ. ರೋಶನ್ ಕುಮಾರ್ ಶೆಟ್ಟಿ ಅವರನ್ನು ಸಹ ಗೌರವಿಸಲಾಯಿತು. ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ನಿತ್ಯಾನಂದ ಕಾರ್ಯಕ್ರಮ ನಿರೂಪಿಸಿ, ವಂದಿಸಿದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News