ಟ್ವಿಟರ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ಜಾಕ್ ಡೋರ್ಸಿ ರಾಜೀನಾಮೆ

Update: 2021-11-29 16:53 GMT
ಜ್ಯಾಕ್ ಡಾರ್ಸೆ(Photo: PTI) / ಪರಾಗ್ ಅಗರವಾಲ್ (Photo: Twitter)

ನ್ಯೂಯಾರ್ಕ್, ನ.29: ಟ್ವಿಟರ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ಜಾಕ್ ಡೋರ್ಸಿ ರಾಜೀನಾಮೆ ನೀಡಿದ್ದಾರೆ. 45ರ ಹರೆಯದ ಡೋರ್ಸಿ ಟ್ವೀಟ್ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದರು.

ಟ್ವಿಟರ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ, ಭಾರತೀಯ-ಅಮೆರಿಕನ್ ಪರಾಗ್ ಅಗರವಾಲ್ ಅವರು ಜಾಕ್ ಡೋರ್ಸಿ ಉತ್ತರಾಧಿಕಾರಿಯಾಗಲಿದ್ದಾರೆ.

ಅಗರವಾಲ್ ಐಐಟಿ-ಬಾಂಬೆ ಹಳೆ ವಿದ್ಯಾರ್ಥಿಯಾಗಿದ್ದು, ಅವರು ಸ್ಟಾನ್‌ಫೋರ್ಡ್‌ನಲ್ಲಿ ಅಧ್ಯಯನ ಮಾಡಲು ಹೋಗಿದ್ದರು. ಅವರು 2011ರಲ್ಲಿ ಟ್ವಟರ್‌ಗೆ ಸೇರುವ ಮೊದಲು ಮೈಕ್ರೊಸಾಫ್ಟ್ ಯಾಹೂ! ಹಾಗೂ ಎಟಿ&ಎಟಿ ಯಲ್ಲಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News