ಡಿ.1ರಿಂದ ಗೃಹ ರಕ್ಷಕ ದಳದ ಪಶ್ಚಿಮ ವಲಯ ಮಟ್ಟದ ಕ್ರೀಡಾಕೂಟ

Update: 2021-11-29 16:25 GMT

ಉಡುಪಿ, ನ.29: ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಆಶ್ರಯದಲ್ಲಿ ಗೃಹ ರಕ್ಷಕ ದಳದ ಪಶ್ಚಿಮ ವಲಯ ಮಟ್ಟದ ಕ್ರೀಡಾಕೂಟವನ್ನು ಡಿ.1ರಿಂದ ಡಿ.3ರ ವರೆಗೆ ಉಡುಪಿಯ ಚಂದು ಮೈದಾನದಲ್ಲಿ ಆಯೋಜಿಸಲಾಗಿದೆ.

ಉಡುಪಿ ಗೃಹರಕ್ಷಕ ದಳದ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ, ಗೃಹರಕ್ಷಕ ದಳದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಒಟ್ಟು 140 ಗೃಹರಕ್ಷಕ/ಗೃಹರಕ್ಷಕಿಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವರು ಎಂದರು.

ಡಿ.1ರಂದು ಸಂಜೆ 4.30ಕ್ಕೆ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಉದ್ಘಾಟಿಸಲಿರುವರು. ಡಿ.3ರಂದು ಸಂಜೆ 4ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಗ್ನಿಶಾಮಕ ಮಚತ್ತು ತುರ್ತುಸೇವೆಗಳ ಆರಕ್ಷಕ ಉಪ ಮಹಾ ನಿರೀಕ್ಷ ಕರು, ಗೃಹರಕ್ಷಕದಳದ ಅಪರ ಮಹಾ ಸಮಾದೇಷ್ಟ ಕೆ.ಟಿ.ಬಾಲೃಕೃಷ್ಣ ಭಾಗವಹಿಸಲಿರುವರು. ಈ ಕ್ರೀಡಾಕೂಟದಲ್ಲಿ ವಿಜೇತರಾಗಿ ಆಯ್ಕೆಯಾದ 50 ಮಂದಿಯನ್ನು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಗೃಹರಕ್ಷಕರ ಕ್ರೀಡಾಕೂಟಕ್ಕೆ ಕಳುಹಿಸಲಾಗು ವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡೆಪ್ಯುಟಿ ಕಮಾಂಡೆಂಟ್ ರಮೇಶ್, ಸಿಬ್ಬಂದಿ ಶ್ಯಾಮಲಾ, ಕವಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News