×
Ad

‘ಕ್ಲಾಸಿಕ್ ಆರ್ಟ್’ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

Update: 2021-11-29 22:08 IST

ಮಣಿಪಾಲ, ನ.29: ಮನುಷ್ಯನನ್ನು ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಸುಸಂಸ್ಕೃತವನ್ನು ಬೆಳೆಸಲು ಮತ್ತು ಪರಿಣಾಮಕಾರಿಯಾಗಿ ಮನೋಚೈತನ್ಯವನ್ನು ಬೆಳೆಸಲು ಕಲಾವಿದನಿಂದ ಸಾಧ್ಯ. ಇದಕ್ಕೆ ಪೂರಕವಾಗಿ ಕಲೆಯಲ್ಲಿ ತೊಡಗಿ ಪ್ರದರ್ಶನದಂತಹ ವೇದಿಕೆ ಸಿಕ್ಕಾಗ ಇನ್ನೂ ಉತ್ತಮವಾಗಿ ಕಲಾಕೃತಿ ರಚಿಸಲು ಪ್ರೇರೇಪಿಸುತ್ತದೆ ಎಂದು ಕುಂದಾಪುರ ಕಲಾ ಕ್ಷೇತ್ರದ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ಹೇಳಿದ್ದಾರೆ.

ಮಣಿಪಾಲ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ರವಿವಾರ ನಡೆದ ಕ್ಲಾಸಿಕ್ ಆರ್ಟ್ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆ ಮುಖ್ಯೋ ಪಾಧ್ಯಾಯ ರಮೇಶ್ ಸೇರ್ವೆಗಾರ್, ಮಣಿಪಾಲ ಎಂಸಿಎಚ್‌ಪಿಯ ಫಿಸಿಯೋ ಥೆರಫಿ ತಜ್ಞ ರಾಜೇಶ್ ನಾವಡ ಜಿ.ವಿ., ಕರಾವಳಿ ಯೂತ್ ಕ್ಲಬ್ ಅಧ್ಯಕ್ಷ ಅಶೋಕ್ ಆಚಾರ್ಯ ಉಪಸ್ಥಿತರಿದ್ದರು.

ಸಂಸ್ಥೆಯ ಮಾರ್ಗದರ್ಶಕ ಹರೀಶ್ ಸಾಗಾ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕಲಾ ವಿದ್ಯಾರ್ಥಿ ಚೇತನಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಅಭಿನಯ ನಾಯಕ್ ಸ್ವಾಗತಿಸಿದರು. ಡಾ. ಸುಮೀತ್ ದಿಲ್ ಸಿಂಗ್ ವಂದಿಸಿ ದರು. ಒಟ್ಟು 50 ವಿದ್ಯಾರ್ಥಿಗಳ 50 ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಈ ಕಲಾ ಪ್ರದರ್ಶನವನ್ನು ನ.30ರವರೆಗೆ ಬೆಳಗ್ಗೆ 10ರಿಂದ ಸಂಜೆ 7.30ರ ತನಕ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News