ಹೊಸ ಟ್ವಿಟರ್ ಸಿಇಒ ಪರಾಗ್ ರನ್ನು ಗುರಿ ಮಾಡಲು ದಶಕದಷ್ಟು ಹಳೆಯ ಟ್ವೀಟ್ ಕೆದಕಿದ ಬಲಪಂಥೀಯ ಟ್ರೋಲ್‌ಗಳು

Update: 2021-11-30 07:08 GMT
ಪರಾಗ್ ಅಗರವಾಲ್ (PTI)

ವಾಷಿಂಗ್ಟನ್: ಟ್ವಿಟರ್‌ನ ಹೊಸ ಸಿಇಒ ಆಗಿ ಭಾರತೀಯ-ಅಮೆರಿಕನ್ ಪರಾಗ್ ಅಗರವಾಲ್ ನೇಮಕಗೊಂಡ ದಿನವೇ ಬಲಪಂಥೀಯ ಟ್ರೋಲ್‌ಗಳು ಹಾಗೂ ಕೆಲ ಮಾಧ್ಯಮ ಸಂಸ್ಥೆಗಳು ಅವರ ಒಂದು ದಶಕ ಹಳೆಯ ಟ್ವೀಟ್ ಒಂದನ್ನು ಕೆದಕಿದ್ದಾರೆ. ಎಲ್ಲಾ ಬಿಳಿಯ ಜನರು ಜನಾಂಗೀಯವಾದಿಗಳು ಎಂದು ಪ್ರರಾಗ್ ನಂಬಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾಗಿ timesofindia ವರದಿ ಮಾಡಿದೆ.

ಅಗ್ರವಾಲ್ ಅವರು ಟ್ವಿಟರ್‌ನಲ್ಲಿ ಉದ್ಯೋಗಕ್ಕೂ ಸೇರುವ ಮುಂಚೆ, ಅಕ್ಟೋಬರ್ 26, 2010ರಂದು ಒಂದು ಟ್ವೀಟ್ ಮಾಡಿದ್ದರು. "ಮುಸ್ಲಿಮರು ಮತ್ತು ತೀವ್ರಗಾಮಿಗಳ ಬಗ್ಗೆ ಯಾವುದೇ ವ್ಯತ್ಯಾಸವನ್ನು ಅವರು ಮಾಡದೇ ಇದ್ದರೆ ನಾನೇಕೆ ಬಿಳಿಯ ಜನರು ಮತ್ತು ಜನಾಂಗೀಯವಾದಿಗಳ ನಡುವೆ ವ್ಯತ್ಯಾಸ ಮಾಡಬೇಕು,'' ಎಂದು ಬರೆದಿದ್ದರು. ಆದರೆ ಇದೇ ಥ್ರೆಡ್‌ನಲ್ಲಿ ತಾನು ಕಾಮಿಡಿಯನ್ ಆಸಿಫ್ ಮಂಡ್ವಿ ಅವರ ಮಾತುಗಳನ್ನು ಉಲ್ಲೇಖಿಸುತ್ತಿರುವುದಾಗಿಯೂ ಪರಾಗ್ ಬರೆದಿದ್ದರು.

ಆದರೆ ತಮ್ಮನ್ನು ಸೆನ್ಸಾರ್ ಮಾಡುತ್ತಿದೆ ಎಂದು ಟ್ವಿಟರ್ ಮೇಲೆ ಆಪಾದನೆ ಹೊರಿಸುತ್ತಲೇ ಇರುವ ಬಲಪಂಥೀಯ ಟ್ರೋಲ್‌ಗಳು ಅಗರವಾಲ್ ಅವರು ಕೂಡ ಹಿಂದಿನ ಟ್ವಿಟರ್ ಸಿಇಒ ರೀತಿಯಲ್ಲಿಯೇ ಮುಂದುವರಿಯಬಹುದು ಹಾಗೂ ತಮ್ಮ ವಿರುದ್ಧ ಕಠಿಣ ನಿಲುವು ತಳೆಯಬಹುದು ಎಂದೇ ಅಂದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಆದರೆ ಟೆಕ್ ಸಮುದಾಯವಂತೂ ಅಗರವಾಲ್ ಅವರು ಸಿಲಿಕಾನ್ ವ್ಯಾಲಿಯಲ್ಲಿ ನಡೆದು ಬಂದ ಹಾದಿಯನ್ನು ವಿಸ್ಮಯದಿಂದ ನೋಡಿದೆ. ಕೇವಲ 11 ವರ್ಷದ ಅವಧಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್‌ನಿಂದ ಸಿಇಒ ಪದವಿಗೇರಿದ ಅವರನ್ನು ಹಾಡಿಹೊಗಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News