×
Ad

ಕಲ್ಲುಕೋರೆಯಲ್ಲಿ ಸ್ಫೋಟ: ಇಬ್ಬರು ಕಾರ್ಮಿಕರಿಗೆ ಗಾಯ

Update: 2021-11-30 16:59 IST

ಕಾರ್ಕಳ : ತಾಲೂಕಿನ ಜಾರ್ಕಳ ಬಳಿಯಿರುವ ಕಲ್ಲುಕೋರೆಯೊಂದರಲ್ಲಿ ಸ್ಫೋಟ ಉಂಟಾದ ಪರಿಣಾಮ ಅಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರಿಬ್ಬರು ಗಾಯಗೊಂಡ ಸೋಮವಾರ ನಡೆದಿದೆ.

ಕ್ರಶರ್ ಅನ್ನು  ಲೀಸ್ ಪಡೆದುಕೊಂಡು ಖಾಸಗಿಯಾಗಿ ನಡೆಸಲಾಗುತಿತ್ತು.  ಮಂಗಳವಾರ ಕಾರ್ಮಿಕರು ಘಟಕದಲ್ಲಿ ಕಾರ್ಯ ನಿರ್ವಹಿಸುತಿದ್ದರು. ಈ ವೇಳೆ ಸ್ಪೋಟ ಉಂಟಾದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News